ಹೆರಿಗೆ ಮಾಡಿಸಿದ ಕಾರ್ಯಕರ್ತೆಯರು

ಹೆರಿಗೆ ಮಾಡಿಸಿದ ಕಾರ್ಯಕರ್ತೆಯರು

ಕಲಬುರಗಿ, ಡಿ.10 : ಕಲಬುರಗಿಯಿಂದ ಬೆಂಗಳೂರಿಗೆ ಆಗಮಿಸುವ ಉದ್ಯಾನ ಎಕ್ಸ್ಪ್ರೆಸ್ ರೈಲಿನಲ್ಲಿ ಮಹಿಳೆ ಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಸೈದಾಪುರ ನಿವಾಸಿ ಗೀತಾ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ. ಅನಿರ್ಧಿಷ್ಟಾವಧಿ ಧರಣಿಗಾಗಿ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯೊಬ್ಬರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರಿಗೆ ಪತಿ ಜೊತೆ ಹೊರಟಿದ್ದ ಗೀತಾ ಅವರಿಗೆ ಪ್ರಯಾಣದ ಮಧ್ಯೆ ಹೆರಿಗೆ ನೋವು ಕಾಣಿಸಿತ್ತು. ಅದೇ ಬೋಗಿಯಲ್ಲಿ ಕಲಬುರಗಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ತೆರಳುತ್ತಿದ್ದರು. ವಿಷಯ ತಿಳಿದ ಕಾರ್ಯಕರ್ತೆಯರು ಗೀತಾ ಅವರಿಗೆ ಸುಲಭ ಹೆರಿಗೆ ಮಾಡಿಸಿದರು.
ಚಿತ್ತಾಪುರ ತಾಲೂಕು ನಾಲವಾರದ ಅಂಗನವಾಡಿ ಕಾರ್ಯಕರ್ತೆಯರಾದ ಮಲ್ಲಿಕಾ, ಹಾಲಾಬಾಯಿ ಮತ್ತಿತರರು ಹೆರಿಗೆ ಮಾಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos