ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ

ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ

ಮಂಗಳೂರು: ಜು.09: ವಿಟ್ಲ ನಿವಾಸಿಯಾಗಿರುವ ಹದಿನೇಳರ ಬಾಲಕಿ ಮೇಲೆ ಗ್ರಾಮ ಪಂಚಾಯತ್ ಸಿಬ್ಬಂದಿ ಸೇರಿ ಐವರು ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂಬ ಆಘಾತಕಾರಿ ಸುದ್ದಿ ತಡವಾಗಿ ಬಹಿರಂಗವಾಗಿದೆ.
ದಕ್ಷಿಣ ಕನ್ನಡ ಪುತ್ತೂರಿನ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ನೆನಪು ಮಾಸುವ ಮುನ್ನವೇ ಕರಾವಳಿ ಜಿಲ್ಲೆಯಲ್ಲಿ ಇನ್ನೊಂದು ಪ್ರಕರಣ ವರದಿಯಾಗಿದೆ.
ಅತ್ಯಾಚಾರದ ಹಿನ್ನೆಲೆ ಆಕೆ ಈಗ ಆರು ತಿಂಗಳ ಗರ್ಭಿಣಿಯಾಗಿದ್ದು ಪೋಲೀಸರು ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬಾಲಕಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮುಗಿದ ನಂತರ ಮನೆಯಲ್ಲೇ ಇರುತ್ತಿದ್ದಳೆನ್ನಲಾಗಿದೆ. ಆ ನಡುವೆ ಗ್ರಾಮ ಪಂಚಾಯತ್ ಸಿಬ್ಬಂದಿಯೂ ಸೇರಿದಂತೆ ಐವರ ತಂಡ ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ಆ ಕಾಮುಕರು ಈ ವಿಷಯವನ್ನು ಯಾರೊಡನೆ ಹಂಚಿಕೊಳ್ಲಬಾರದೆಂದು ಬಾಲಕಿಗೆ ಹೆದರಿಸಲಾಗಿತ್ತು ಮಾಡಿದ್ದರೆಂದು ಪೋಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಮನೆಗೆ ಆಗಮಿಸಿದ್ದ ಆಶಾ ಕಾರ್ಯಕರ್ತೆಯು ಬಾಲಕಿಯನ್ನು ಪರೀಕ್ಷಿಸಿ ಆಕೆ ಗರ್ಭವತಿ ಎಂದು ತಿಳಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಘಟನೆ ಕುರಿತು ವಿಟ್ಲ ಪೋಲೀಸರು ತನಿಖೆ ಕೈಗೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos