ಚಿಕ್ಕು ಜ್ಯೂಸ್ ಕುಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು

ಚಿಕ್ಕು ಜ್ಯೂಸ್ ಕುಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು

ಚಿಕ್ಕು ಅಥವಾ ಸಪೋಟಾ ಗಾಢ ಖಾಕಿ ಬಣ್ಣದ, ಸಮಶೀತೋಷ್ಣ ವಲಯದಲ್ಲಿ ಬೆಳೆಯುವ ಸಿಹಿಯಾದ ಹಣ್ಣಾಗಿದೆ. ಸಪೋಟೇಸೀ (Sapotaceae)ಎಂಬ ಸಸ್ಯವರ್ಗಕ್ಕೆ ಸೇರಿದ ಈ ಸಸ್ಯದ ವೈಜ್ಞಾನಿಕ ಹೆಸರು Manilkara zapota.ಇದು ಮೆಕ್ಸಿಕೋ, ಮಧ್ಯ ಅಮೇರಿಕಾ ಹಾಗೂ ಕ್ಯಾರೆಬೆಯನ್ ಮೂಲದ ಹಣ್ಣಾಗಿದ್ದು ವಿದೇಶೀಯರ ಭಾರತ ದರ್ಶನದ ಸಮಯದಲ್ಲಿ ಇತರ ಹಣ್ಣುಗಳಂತೆಯೇ ಇಲ್ಲಿಗೂ ಆಗಮಿಸಿದೆ. ಚಿಕ್ಕು, ಲಮೂತ್, ನೋಸ್ ಬೆರ್ರಿ ಹಾಗೂ ಸಪೋತಿ ಎಂಬ ಹೆಸರುಗಳೂ ಈ ಹಣ್ಣಿಗಿವೆ.

ಈ ಹಣ್ಣಿನ ನಡುವಣ ಕೋಲಿನಂತಹ ಭಾಗವನ್ನು ಹಾಗೂ ಬೀಜಗಳನ್ನು ನಿವಾರಿಸಿದರೆ ನಿಸರ್ಗವೇ ಅಚ್ಚುಕಟ್ಟಾಗಿ ಕತ್ತರಿಸಿಟ್ಟಂತೆ ಇದರ ತಿರುಳಿದ್ದು ಇದು ಇನ್ನಷ್ಟು ಗಾಢ ಕಂದು ಬಣ್ಣ ಹೊಂದಿರುತ್ತದೆ. ತುಮ್ಬಾ ಸಿಹಿಯಾಗಿರುವ ಈ ತಿರುಳು ನಯವಾದ ರವೆಯಂತಿರುತ್ತದೆ. ಇದರ ಜ್ಯೂಸ್ ತಯಾರಿಸಲು ಸಿಪ್ಪೆ ನಿವಾರಿಸಿ ಕೇವಲ ತಿರುಳನ್ನು ಹಾಲಿನೊಂದಿಗೆ ಕಡೆದರೆ ಸಾಕು. ಸಕ್ಕರೆ ಬೆರೆಸುವ ಅಗತ್ಯವಿಲ್ಲ. ಸಪೋಟಾ ಜ್ಯೂಸ್, ಚಿಕ್ಕೂ ಜ್ಯೂಸ್ ಅಥವಾ ಸಾಪೋಡಿಲ್ಲಾ ಜ್ಯೂಸ್ ಎಂಬ ಹೆಸರುಗಳಿಂದ ಕರೆಯಲ್ಪಡುವ ಈ ಪೇಯ ವಿಶಿಷ್ಟ ಸ್ವಾದ ಹೊಂದಿದ್ದು ಇದರ ಸೇವನೆಯಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇವುಗಳಲ್ಲಿ ಪ್ರಮುಖವಾದ ಪ್ರಯೋಜನಗಳು ಇಂತಿವೆ

ಚಿಕ್ಕು ಜ್ಯೂಸ್ ಕುಡಿದರೆ ತ್ವಚೆ, ಕೂದಲು ಹಾಗೂ ಆರೋಗ್ಯಕ್ಕೆ ಬಹಳ ಒಳ್ಳೆಯದು 
ಅವಶ್ಯಕ ಪೋಷಕಾಂಶಗಳ ಉತ್ತಮ ಮೂಲವಾಗಿದೆ

ಬಹುತೇಕ ಎಲ್ಲಾ ಹಣ್ಣಿನ ರಸಗಳಂತೆಯೇ ಚಿಕ್ಕು ಜ್ಯೂಸ್ ಸಹಾ ಹಲವಾರ ಅವಶ್ಯಕ ಪೋಷಕಾಂಶಗಳನ್ನೊಳ ಗೊಂಡಿದೆ. ವಿಶೇಷವಾಗಿ ವಿಟಮಿನ್ ಎ, ಬಿ ಮತ್ತು ಸಿ ಇವೆ. ಜೊತೆಗೇ ಉತ್ತಮ ಪ್ರಮಾಣದ ತಾಮ್ರ, ನಿಯಾಸಿನ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಗಂಧಕಗಳೂ ಇವೆ.

ಚಿಕ್ಕು ಜ್ಯೂಸ್ ಕುಡಿದರೆ ತ್ವಚೆ, ಕೂದಲು ಹಾಗೂ ಆರೋಗ್ಯಕ್ಕೆ ಬಹಳ ಒಳ್ಳೆಯದು 
ವಾಯುಪ್ರಕೋಪ ಮತ್ತು ಹೊಟ್ಟೆಯ ತೊಂದರೆಗಳನ್ನು ಸರಿಪಡಿಸುತ್ತದೆ ಚಿಕ್ಕೂ ಜ್ಯೂಸ್ ನಲ್ಲಿ ಟ್ಯಾನಿನ್ ಗಳೆಂಬ ನೈಸರ್ಗಿಕ ರೂಪದ ಪಾಲಿಫೆನಾಲ್ ಗಳಿವೆ. ಇವು ಕ್ಷಾರೀಯವಾಗಿದ್ದು ಪ್ರೋಟೀನುಗಳನ್ನು ಒಡೆಯುವ ಮೂಲಕ ಹೊಟ್ಟೆ ಮತ್ತು ಕರುಳುಗಳಲ್ಲಿ ಎದುರಾಗುವ ಆಮ್ಲೀಯತೆಯನ್ನು ನಿಷ್ಕ್ರಿಯಗೊಳಿಸುತ್ತವೆ.

ಅಲ್ಲದೇ ಹೊಟ್ಟೆ ಕರುಳುಗಳಲ್ಲಿರುವ ಪರಾವಲಂಬಿ ಕ್ರಿಮಿಗಳನ್ನು ಹೊಡೆದೋಡಿಸುವ ಗುಣ, ಉರಿಯೂತ ನಿವಾರಕ ಗುಣ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳನ್ನೂ ಹೊಂದಿದೆ. ವಿಶೇಷವಾಗಿ ಉರಿಯೂತ ನಿವಾರಕ ಗುಣ ವಾಯುಪ್ರಕೋಪ ಮತ್ತು ಇತರ ತೊಂದರೆಗಳನ್ನು ಸರಿಪಡಿಸುತ್ತದೆ ಹಾಗೂ ಕರುಳುಗಳಲ್ಲಿ ಜೀರ್ಣಕ್ರಿಯೆ ಸರಾಗವಾಗಿ ಜರುಗಲು ಮತ್ತು ವಿಸರ್ಜನಾ ಕಾರ್ಯವೂ ಸುಲಭವಾಗಿ ನಡೆಯಲು ನೆರವಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos