ಕುಂದಗೋಳ ಶೇ.82. ಚಿಂಚೋಳಿ ಶೇ.71 ದಾಖಲೆ ಮತದಾನ..!

ಕುಂದಗೋಳ ಶೇ.82. ಚಿಂಚೋಳಿ ಶೇ.71 ದಾಖಲೆ ಮತದಾನ..!

ಹುಬ್ಬಳ್ಳಿ,ಕಲಬುರಗಿ, ಮೇ.  20, ನ್ಯೂಸ್ ಎಕ್ಸ್ ಪ್ರೆಸ್ : ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ದಾಖಲೆ ಮತದಾನವಾಗಿದೆ. ಹುಬ್ಬಳ್ಳಿ ಜಿಲ್ಲೆಯ ಕುಂದಗೋಳದಲ್ಲಿ ಶೇ.82.42, ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ಶೇ.71 ಮತದಾನವಾಗಿದೆ. ಅಲ್ಲಲ್ಲಿ ಮತಯಂತ್ರಗಳು ಕೈಕೊಟ್ಟ ಉದಾಹರಣೆಗಳನ್ನು ಬಿಟ್ಟರೆ, ಬಹುತೇಕ ಕಡೆ ಮತದಾನ  ಭಾನುವಾರ ಶಾಂತಿಯುತವಾಗಿ ನಡೆದಿದೆ.

ಚಿಂಚೋಳಿ ಕ್ಷೇತ್ರ ಬಿಜೆಪಿಯಿಂದ ಸ್ಪರ್ಧಿಸಿರುವ ಡಾ. ಅವಿನಾಶ್‌ ಜಾಧವ್‌ , ಬೆಡಸೊರ ತಾಂಡದಲ್ಲಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಸುಭಾಷ್‌ ರಾಠೊಡ ಅವರು ಶೇರಿತಾಂಡದಲ್ಲಿ ಹಕ್ಕು ಚಲಾಯಿಸಿದರು. ಬಿಸಿಲಿನ ತಾಪದಿಂದಾಗಿ 100 ಕ್ಕೂ ಹೆಚ್ಚು ಮತಯಂತ್ರಗಳು ಕೆಟ್ಟುಹೋದ ಘಟನೆಯೂ ನಡೆಯಿತು.  ಕುಂದಗೋಳ ಕ್ಷೇತ್ರದಲ್ಲಿ ಹುಬ್ಬಳ್ಳಿ ತಾಲೂಕಿನ ಅದರಗುಂಚಿಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡರ, ಯರಗುಪ್ಪಿ ಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಮತದಾನ ಮಾಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos