ಏಷ್ಯನ್ ಗೇಮ್ಸ್ ಗೆ ಚೆಸ್ ವಾಪಸ್; ವಿಶ್ವನಾಥನ್ ಸಂತಸ

ಏಷ್ಯನ್ ಗೇಮ್ಸ್ ಗೆ ಚೆಸ್ ವಾಪಸ್; ವಿಶ್ವನಾಥನ್ ಸಂತಸ

ಚೆನ್ನೈ, ಮಾ. 18, ನ್ಯೂಸ್ ಎಕ್ಸ್ ಪ್ರೆಸ್: ಏಷ್ಯನ್ ಗೇಮ್ಸ್ಗೆ ಚೆಸ್ ವಾಪಸಾಗಿದೆ. 2022ರಲ್ಲಿ ಚೀನಾದ ಹ್ಯಾಂಗ್ಝುನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ ಚೆಸ್ ನಡೆಯಲಿದೆ ಎಂದು ಏಷ್ಯನ್ ಒಲಿಂಪಿಕ್ ಸಮಿತಿ ಮುಖ್ಯಸ್ಥರು ತಿಳಿಸಿದ್ದಾರೆ.

2006ರ ದೋಹಾ ಹಾಗೂ 2010ರ ಗುವಾಂಗ್ಝು ಏಷ್ಯಾಡ್ನಲ್ಲಿ ಚೆಸ್ ಇತ್ತು. 2006ರಲ್ಲಿ ಭಾರತ 2 ಚಿನ್ನ ಜಯಿಸಿದರೆ, 2010ರಲ್ಲಿ 2 ಕಂಚಿನ ಪದಕ ಗಳಿಸಿತ್ತು. 2014 ಹಾಗೂ 2018ರ ಏಷ್ಯನ್ ಗೇಮ್ಸ್ ಗಳಲ್ಲಿ ಚೆಸ್ ಸ್ಪರ್ಧೆ ನಡೆದಿರಲಿಲ್ಲ.

ಮುಂದಿನ ಏಷ್ಯನ್ ಗೇಮ್ಸ್ ನಲ್ಲಿ ಚೆಸ್ ಸೇರ್ಪಡೆಗೊಳಿಸಿದ್ದಕ್ಕೆ 5 ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಸೇರಿ ಭಾರತದ ಅಗ್ರ ಚೆಸ್ ಪಟುಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos