ಚೆನ್ನೈ-ಮುಂಬೈ ನಡುವೆ ಇಂದು ಕದನ

ಚೆನ್ನೈ-ಮುಂಬೈ ನಡುವೆ ಇಂದು ಕದನ

ಚೆನ್ನೈ, . 26, ನ್ಯೂಸ್ ಎಕ್ಸ್ ಪ್ರೆಸ್: 12ನೇ ಐಪಿಎಲ್  ಆವೃತ್ತಿಯಲ್ಲಿ ಪ್ಲೇ-ಆಫ್ಗೇರುವ ನೆಚ್ಚಿನ ತಂಡಗಳೆನಿಸಿಕೊಂಡಿರುವ 3 ಬಾರಿ ಚಾಂಪಿಯನ್ ಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್, ಇಂದು ಚೇಪಾಕ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಚೆನ್ನೈ ಈಗಾಗಲೇ 16 ಅಂಕ ಗಳಿಸಿ ಪ್ಲೇ-ಆಫ್ ನಲ್ಲಿ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್ ನಲ್ಲಿ ಸ್ಥಾನ ಅಧಿಕೃತಗೊಳ್ಳಲಿದೆ. ಮುಂಬೈ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಜಯಿಸಿದರೆ ಪ್ಲೇ-ಆಫ್ ಸನಿಹಕ್ಕೆ ತಲುಪಲಿದೆ.

ಹಾಲಿ ಚಾಂಪಿಯನ್ ಚೆನ್ನೆ ಸೂಪರ್ ಕಿಂಗ್ಸ್ ಈ ವರ್ಷ ತವರಿನಲ್ಲಿ ಆಡಿರುವ ಎಲ್ಲಾ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಪಂದ್ಯವನ್ನೂ ಗೆದ್ದು ಡಬಲ್ ಹ್ಯಾಟ್ರಿಕ್ ಬಾರಿಸಲು ಧೋನಿ ಪಡೆ ಎದುರು ನೋಡುತ್ತಿದೆ. ತಂಡ ಎದುರಿಸುತ್ತಿದ್ದ ಅಗ್ರ ಕ್ರಮಾಂಕದ ಸಮಸ್ಯೆಯೂ ಬಗೆಹರಿದಂತೆ ಕಾಣುತ್ತಿದ್ದು, ಚೆನ್ನೈ ಗೆಲ್ಲುವ ಫೇವರಿಟ್ ಎನಿಸಿಕೊಳ್ಳುತ್ತಿದೆ.

ಮುಂಬೈ ಮಧ್ಯಮ ಕ್ರಮಾಂಕದ ಸಮಸ್ಯೆ ಎದುರಿಸುತ್ತಿದೆ. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಡಿ ಕಾಕ್ ಮೇಲೆ ಹೆಚ್ಚು ಒತ್ತಡ ಬೀಳುತ್ತಿದ್ದು, ಬೌಲರ್ಗಳಿಂದಲೂ ತಂಡ ಸುಧಾರಿತ ಪ್ರದರ್ಶನವನ್ನು ನಿರೀಕ್ಷೆ ಮಾಡುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos