ಛತ್ತೀಸ್ಗಢದಲ್ಲಿ ಮಹಿಳಾ ನಕ್ಸಲ್ ಹತ್ಯೆ

ಛತ್ತೀಸ್ಗಢದಲ್ಲಿ ಮಹಿಳಾ ನಕ್ಸಲ್ ಹತ್ಯೆ

ರಾಯ್ಪುರ್, ಜು. 9: ಛತ್ತೀಸ್ಗಢದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ. ಸುಕ್ಮಾ ಜಿಲ್ಲೆಯಲ್ಲಿಂದು ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲೀಯ ಮಹಿಳೆಯೊಬ್ಬಳು ಹತಳಾಗಿದ್ದಾಳೆ.
ಕಳೆದ ವಾರ ಛತ್ತೀಸ್ಗಢದ ಧಮ್ತರಿ ಅರಣ್ಯ ಪ್ರದೇಶದಲ್ಲಿ ಯೋಧರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಮಹಿಳೆಯರೂ ಸೇರಿದಂತೆ ನಾಲ್ವರು ನಕ್ಸಲರು ಹತರಾಗಿದ್ದರು. ಡಬ್ಬಕೊಂಟಾ ಗ್ರಾಮದ ಬಳಿ ಅರಣ್ಯದಲ್ಲಿ ಇಂದು ಮುಂಜಾನೆ 6 ಗಂಟೆಯಲ್ಲಿ ಜಂಟಿ ಭದ್ರತಾ ಪಡೆಗಳು ನಕ್ಸಲರಿಗಾಗಿ ಶೋಧ ನಡೆಸುತ್ತಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos