ಶ್ರೀಗಳ ಬೃಂದಾವನ ಮುಂದೆ ಮಂತ್ರಪಟನೆ

ಶ್ರೀಗಳ ಬೃಂದಾವನ ಮುಂದೆ ಮಂತ್ರಪಟನೆ

ಬೆಂಗಳೂರು,ಡಿ. 30 : ಉಡುಪಿಯ ಪೇಜಾವರ ಶ್ರೀಗಳು ತಾವೇ ಕಟ್ಟಿ ಬೆಳೆಸಿದ ವಿದ್ಯಾಪೀಠದಲ್ಲಿ ಶ್ರೀ ಕೃಷ್ಣನ ಸನ್ನಿಧಾನದ ಪಕ್ಕದಲ್ಲೇ ಬೃಂದಾವನ ಪ್ರವೇಶ ಮಾಡಿದ್ದಾರೆ. ರಾತ್ರಿಯಿಂದನೂ ಕೂಡ ಭಜನೆ ಆರಾಧನೆಗಳು ನಡೆದಿವೆ. ಜೊತೆಗೆ ಮುಂಜಾನೆ 5 ಗಂಟೆಗೆ ಶ್ರೀಯುತರ ಶಿಷ್ಯ ವೃಂದದಿಂದ ಮಂತ್ರಪಟನೆ ಆಗಿದೆ.
ಶಿಷ್ಯ ವೃಂದದವರಿಂದ ಬೃಂದಾವನದ ಮುಂದೆ ಪವಮಾನಸೂಕ್ತ ಮಂತ್ರಪಟನೆ. ವಾಯು ದೇವರ ಮೂರು ಅವತಾರಗಳಾದ ಹನುಮಂತ, ಭೀಮ ಮತ್ತು ಮಧ್ವ ದೇವರ ಮಂತ್ರ ಪಟನೆ ನಡೆಯುತ್ತಿದ್ದು, ಇಂದು 9 ಗಂಟೆಗೆ ಹವನ ಹೋಮ ಆರಂಭವಾಗಿದೆ.

ಪೂರ್ಣ ಪ್ರಜ್ಞಾ ವಿದ್ಯಾಪೀಠದ ಕೃಷ್ಣ ಸನ್ನಿಧಾನದ ಪಕ್ಕದಲ್ಲೇ ಬೃಂದಾವನ ನಿರ್ಮಾಣ ಆಗಿದೆ. ಭಕ್ತರಿಗೆ ವಿಶ್ವೇಶ ತೀರ್ಥ ಶ್ರೀಗಳ ಬೃಂದಾವನ ವೀಕ್ಷಣೆಗೆ ಅನುಮತಿ ನೀಡಲಾಗಿದೆ. ಮುಂಜಾನೆಯಿಂದಲೂ ಭಕ್ತರು ಶ್ರೀಯುತರ ಬೃಂದಾವನದ ದರ್ಶನ ಪಡೆಯುತ್ತಿದ್ದಾರೆ. 11 ದಿನಗಳವರೆಗೂ ವಿಶೇಷ ಪಾರಾಯಣ ಧಾರ್ಮಿಕ ಕಾರ್ಯಕ್ರಮಗಳು ಬೃಂದಾವನದ ಮುಂದೆ ನೆರವೇರಲಿವೆ. ಇಂದು ಸಹ ಪೂಜಾ ವಿಧಿ ವಿಧಾನಗಳು ನಡೆಯಲಿದ್ದು, ಭಕ್ತರು ಭಾಗವಹಿಸಬಹುದಾಗಿದೆ.

ಚತುರ್ವೇದ ಪಾರಾಯಣ, ಅನ್ನ ಸಂತಪರ್ಣೆ ಭಜನೆ, ಚರ್ತುಮೂರ್ತಿ ಆರಾಧನೆ, ಐದು ಮೂರ್ತಿಗಳ ಆರಾಧನೆ, ಹವನ ಹೋಮ ಮತ್ತು ಪವನ ಸೂಕ್ತ ಮಂತ್ರ ಪಠಣೆಗಳು ಇಂದು ವಿದ್ಯಾಪೀಠದಲ್ಲಿ ನೆರವೇರಲಿದೆ.

ಫ್ರೆಶ್ ನ್ಯೂಸ್

Latest Posts

Featured Videos