ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ

ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ

ಕೋಲಾರ: ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿ ಹಾಗೂ ಶಿಕ್ಷಕ ಪ್ರೇಮಿಯಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಆಗಲಿದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶಿಕ್ಷಕ ಸಂಘಟನೆಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಶಿಕ್ಷಣ ನೀತಿ ರಚಿತವಾಗಿದೆ, ಇದರಿಂದ ಶಿಕ್ಷಕರ ಅನೇಕ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದರು.
ಶಿಕ್ಷಣದಲ್ಲಿ ಅರಿವಿನ ಜತೆ ಕೌಶಲ್ಯವೂ ಮಕ್ಕಳಿಗೆ ಸಿಗಲಿದೆ, ಕಲಿಕೆ ಜತೆಗೆ ಬದುಕು ರೂಪಿಸಿಕೊಳ್ಳುವ ಶಿಕ್ಷಣ ಮೋದಿಯವರ ಕನಸಾಗಿದೆ, ಆ ಕನಸನ್ನು ನಮ್ಮ ರಾಜ್ಯದಲ್ಲೂ ನನಸು ಮಾಡಲು ಶಿಕ್ಷಕರು ಸಹಕಾರ ನೀಡಬೇಕು ಎಂದರು.
ರಾಜ್ಯದಲ್ಲಿ ನಡೆದ ವಿಧಾನಪರಿಷತ್ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಎಲ್ಲಾ ೪ ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲುವು ಲಭಿಸಿದೆ, ರಾಜ್ಯದ ಶಿಕ್ಷಕರು, ಪದವೀಧರರು, ಸರ್ಕಾರಿ ನೌಕರರು ನಮ್ಮನ್ನು ಬೆಂಬಲಿಸುವ ಮೂಲಕ ಹೆಚ್ಚಿನ ಜವಾಬ್ದಾರಿ ವಹಿಸಿದ್ದೀರಿ, ನಿಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸುವೆ ಎಂದು ಭರವಸೆ ನೀಡಿದರು.
ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಚಿದಾನಂದಗೌಡರ ಗೆಲುವು ನನ್ನ ಗೆಲುವಾಗಿದೆ, ಶಿಕ್ಷಕ,ಪದವೀಧರ ಮತದಾರರು ನನ್ನ ಮನವಿಗೆ ಓಗೋಟ್ಟು ಅಭೂತಪೂರ್ವ ಬೆಂಬಲ ನೀಡಿದ್ದೀರಿ, ನಿಮಗೆ ನಾನು ಚಿರಋಣಿ ಎಂದರು.
ಮುಖ್ಯಮಂತ್ರಿಗಳಿಗೆ ಈ ಗೆಲುವಿನ ಕುರಿತು ಭರವಸೆ ನೀಡಿದ್ದೆ, ಚಿದಾನಂದಗೌಡರನ್ನು ಗೆಲ್ಲಿಸಿಕೊಂಡು ಬರುವ ಹೊಣೆ ನನ್ನದಾಗಿತ್ತು. ಆದರೆ ಮತದಾರರಾದ ತಾವು ನನಗೆ ನೀಡಿದಷ್ಟೇ ಸಹಕಾರ ನೀಡಿದ್ದೀರಿ ಎಂದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಪರವಾಗಿ ರಾಜ್ಯ ಕಾರ್ಯದರ್ಶಿ ಜಿ.ಸುರೇಶ್‌ಬಾಬು, ನಿಕಟಪೂರ್ವ ಖಜಾಂಚಿ ಎಸ್.ಚೌಡಪ್ಪ ವೈ.ಎ.ಎನ್‌ರನ್ನು ಸನ್ಮಾನಿಸಿ, ಶಿಕ್ಷಕರು,ಸರ್ಕಾರಿ ನೌಕರರ ಸಮಸ್ಯೆಗಳನ್ನು ಗಮನಕ್ಕೆ ತಂದರು.

ಫ್ರೆಶ್ ನ್ಯೂಸ್

Latest Posts

Featured Videos