ಹಸೆಮಣೆಗೆ ಚಂದು, ನಿವೇದಿತಾ

ಹಸೆಮಣೆಗೆ ಚಂದು, ನಿವೇದಿತಾ

ಬೆಂಗಳೂರು,ಜ.11:ಬಿಗ್​ಬಾಸ್​ ರಿಯಾಲಿಟಿ ಶೋಗೆ ಸ್ಪರ್ಧಿಗಳಾಗಿ ಹೋಗಿ, ಸ್ನೇಹಿತರಾಗಿ ಹೊರಬಂದಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅಕ್ಟೋಬರ್ ತಿಂಗಳಲ್ಲಿ ಮೈಸೂರಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿ ಹಸೆಮಣೆಯೇರಲು ಸಜ್ಜಾಗಿದ್ದು, ಮುಂದಿನ ತಿಂಗಳೇ ಅದ್ದೂರಿಯಾಗಿ ಮದುವೆ ನಡೆಯಲಿದೆ. ಈಗಾಗಲೇ ಮದುವೆಗೆ ಸಿದ್ಧತೆಗಳು ಶುರುವಾಗಿದ್ದು, ಕನ್ನಡ ಬಿಗ್​ಬಾಸ್ ಸ್ಪರ್ಧಿಗಳಿಬ್ಬರು ಮೊದಲ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಬಿಗ್​ಬಾಸ್​ ಸೀಸನ್​ 5ರ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ 2019ರ ಅಕ್ಟೋಬರ್ 21ರಂದು ಎಂಗೇಜ್ ಆಗಿದ್ದರು. 2019ರ ಯುವ ದಸರಾ ವೇದಿಕೆಯಲ್ಲೇ ಚಂದನ್ ನಿವೇದಿತಾಗೆ ಪ್ರಪೋಸ್ ಮಾಡುವ ಮೂಲಕ ಪ್ರೇಮ ನಿವೇದನೆ ಮಾಡಿಕೊಂಡಿದ್ದರು.

ಈ ಮೂಲಕ ಚಂದನ್ ಮತ್ತು ನಿವೇದಿತಾ ಬಗ್ಗೆ ಎದ್ದಿದ್ದ ಗಾಸಿಪ್​ಗೆ ತೆರೆ ಎಳೆದಿದ್ದರು. ಆದರೆ, ಇದೇ ಚಂದನ್ ಶೆಟ್ಟಿಗೆ ಮುಳುವಾಗಿತ್ತು. ದಸರಾ ವೇದಿಕೆಯನ್ನು ಪ್ರೇಮ ನಿವೇದನೆಗೆ ಬಳಸಿಕೊಂಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಯುವದಸರಾದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಬಂದಿದ್ದ ಚಂದನ್ ಶೆಟ್ಟಿ ನಿವೇದಿತಾಳನ್ನು ವೇದಿಕೆಗೆ ಕರೆದು, ಐ ಲವ್ ಯೂ ಎಂದು ಹೇಳಿ ಉಂಗುರ ತೊಡಿಸಿದ್ದರು. ಈ ಬಗ್ಗೆ ದಸರಾ ಆಯೋಜಕರಿಗೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ, ಇದು ವಿವಾದಕ್ಕೆ ಕಾರಣವಾಗಿತ್ತು.

ಅದಾದ ನಂತರ ಮೈಸೂರಿನಲ್ಲಿ ಅಧಿಕೃತವಾಗಿ ಇಬ್ಬರ ನಿಶ್ಚಿತಾರ್ಥ ನಡೆದಿತ್ತು. ಈ ಮೂಲಕ ಚಿಕ್ಕಮಗಳೂರು ಮೂಲದ ಚಂದನ್ ಶೆಟ್ಟಿ ಮತ್ತು ಮೈಸೂರಿನ ನಿವೇದಿತಾ ಗೌಡ ಮದುವೆಯಾಗುವುದಾಗಿ ಅಧಿಕೃತವಾಗಿ ಘೋಷಿಸಿದ್ದರು. ಈ ಮೂಲಕ ಚಿಕ್ಕಮಗಳೂರು ಮೂಲದ ಚಂದನ್ ಶೆಟ್ಟಿ ಮತ್ತು ಮೈಸೂರಿನ ನಿವೇದಿತಾ ಗೌಡ ಮದುವೆಯಾಗುವುದಾಗಿ ಅಧಿಕೃತವಾಗಿ ಘೋಷಿಸಿದ್ದರು.

ನಿಶ್ಚಿತಾರ್ಥ ಮಾಡಿಕೊಂಡಿದ್ದ ವಿಚಾರ ಭಾರೀ ಸುದ್ದಿಯಾಗಿತ್ತು. ಇಬ್ಬರೂ ತಮ್ಮ ಪ್ರೀತಿಗೆ ಹೊಸ ಅರ್ಥ ನೀಡಿದ್ದಕ್ಕೆ ಅವರ ಅಭಿಮಾನಿಗಳು ಖುಷಿ ಪಟ್ಟಿದ್ದರು. ಇದೀಗ ಮದುವೆ ದಿನಾಂಕವನ್ನು ಘೋಷಿಸಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕುಟುಂಬದವರು ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.  ಟಿಕ್​ಟಾಕ್ ಮೂಲಕ ಫೇಮಸ್ ಆಗಿದ್ದ ನಿವೇದಿತಾ ಬಿಗ್​ಬಾಸ್​ಗೆ ಹೋದ ಬಳಿಕ ಇನ್ನಷ್ಟು ಸುದ್ದಿಯಾಗಿದ್ದರು.

ಚಂದನ್ ಶೆಟ್ಟಿ ಕನ್ನಡದ ಬಿಗ್​ಬಾಸ್​ ಸೀಸನ್​ 5ರ ವಿಜೇತರಾಗಿದ್ದರು. ಬಿಗ್​ಬಾಸ್​ನಿಂದ ಬಂದ ಬಳಿಕ ಚಂದನ್​ ಶೆಟ್ಟಿಗೆ ಬೇಡಿಕೆಯೂ ಹೆಚ್ಚಾಗಿದೆ.  ಕಾಲೇಜು ಶಿಕ್ಷಣ ಮುಗಿಸಿ ನಿವೇದಿತಾ ಗೌಡ ಉದ್ಯೋಗಕ್ಕೆ ಸೇರಿದ್ದಾರೆ. ಮೈಸೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಂದನ್ ಶೆಟ್ಟಿ- ನಿವೇದಿತಾ ಗೌಡ ಮೈಸೂರಿನಲ್ಲೇ ಹಸೆಮಣೆ ಏರಲಿದ್ದು, ಫೆಬ್ರವರಿ 25 ಮತ್ತು 26ರಂದು ಮೈಸೂರಿ​ನಲ್ಲಿ ಚಂದನ್- ನಿವೇದಿತಾ ಮದುವೆ ನಡೆಯಲಿದೆ.

 

ಫ್ರೆಶ್ ನ್ಯೂಸ್

Latest Posts

Featured Videos