ಚಂಬಲ್: ನೀನಾಸಂ ಸತೀಶ್ ಪಾತ್ರದ ಬಗ್ಗೆ ಅಪ್ಪು ಭರವಸೆ!

ಚಂಬಲ್: ನೀನಾಸಂ ಸತೀಶ್ ಪಾತ್ರದ ಬಗ್ಗೆ ಅಪ್ಪು ಭರವಸೆ!

ಬೆಂಗಳೂರು: ಜೇಕಬ್ ವರ್ಗೀಸ್ ನಿರ್ದೇಶನದ ಚಂಬಲ್ ಚಿತ್ರದ ಟ್ರೈಲರ್ ಬಿಡುಗಡೆಯಾದ ಬಳಿಕ ಜನ ಬಹುವಾಗಿ ಮಾತಾಡಿದ್ದು ನೀನಾಸಂ ಸತೀಶ್ ಅವರ ಬಗ್ಗೆ. ಯಾಕಂದ್ರೆ ಇದರಲ್ಲಿ ಬದಲಾದ ನೀನಾಸಂ ಸತೀಶ್ ಸ್ಪಷ್ಟವಾಗಿಯೇ ಕಾಣಿಸಿಕೊಂಡಿದ್ದರು. ಮ್ಯಾನರಿಸಂ, ಮಾತು ಸೇರಿದಂತೆ ಎಲ್ಲದರಲ್ಲಿಯೂ ಅಂಥಾದ್ದೊಂದು ಬದಲಾವಣೆ, ಹೊಸತನ ಆವರಿಸಿಕೊಂಡಿತ್ತು.

ಕೇಲವ ಟ್ರೈಲರ್ ಮಾತ್ರವಲ್ಲ, ಇಡೀ ಚಿತ್ರದುದ್ದಕ್ಕೂ ಬದಲಾದ ಇಮೇಜಿನಲ್ಲಿಯೇ ಸತೀಶ್ ಕಂಗೊಳಿಸಲಿದ್ದಾರಂತೆ. ನಿರ್ದೇಶಕ ಜೇಕಬ್ ವರ್ಗೀಸ್ ಅಂಥಾದ್ದೊಂದು ಕಮಾಲ್ ಅನ್ನು ಚಂಬಲ್ ಮೂಲಕ ಸೃಷ್ಟಿಸಿದ್ದಾರೆ.

ಇದೀಗ ನೀನಾಸಂ ಸತೀಶ್ ಅವರು ಚಂಬಲ್ ನಲ್ಲಿ ಜೀವ ತುಂಬಿರುವ ಪಾತ್ರದ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡಾ ಭರವಸೆಯ ಮಾತುಗಳನ್ನಾಡಿದ್ದಾರೆ. ನಾನು ಪಂಚರಂಗಿ ಸಿನಿಮಾ ಕಾಲದಿಂದಲೂ ನೀನಾಸಂ ಸತೀಶ್ ಅವರ ನಟನೆಯನ್ನು ಗಮನಿಸುತ್ತಾ ಬಂದಿದ್ದೇನೆ. ಅವರೊಬ್ಬ ಒಳ್ಳೆ ನಟ ಅನ್ನೋದು ಪ್ರತೀ ಸಿನಿಮಾಗಳಲ್ಲಿಯೂ ಸ್ಪಷ್ಟವಾಗಿದೆ. ಆದರೆ ಚಂಬಲ್ ಚಿತ್ರ ಮಾತ್ರ ಅವರಿಗೆ ಬೇರೆಯದ್ದೇ ಥರದ ಇಮೇಜ್ ಕಟ್ಟಿ ಕೊಡಲಿದೆ ಅಂತಲೂ ಅಪ್ಪು ಪ್ರೀತಿಯಿಂದ ಭವಿಷ್ಯ ನುಡಿದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos