ಚಾಮರಾಜನಗರ ಜಿಲ್ಲಾಸ್ಪತ್ರೆ: ಇಲ್ಲಿ ಸೆಕ್ಯುರಿಟಿಯೇ ನರ್ಸ್

  • In State
  • January 10, 2019
  • 209 Views
ಚಾಮರಾಜನಗರ ಜಿಲ್ಲಾಸ್ಪತ್ರೆ: ಇಲ್ಲಿ ಸೆಕ್ಯುರಿಟಿಯೇ ನರ್ಸ್

ಚಾಮರಾಜನಗರ: ಸಮಸ್ಯೆಗಳ ಅಗರ ಚಾಮರಾಜನಗರದ ಜಿಲ್ಲಾ ಆಸ್ಪತ್ರೆ. ಇಲ್ಲಿ ನರ್ಸ್ ಗಳೇ ಇಲ್ಲ. ವಾಚ್ ಮನ್ನೇ ಇಲ್ಲಿ ನರ್ಸ್, ಈತನೇ ರೋಗಿಗೆ ಗ್ಲುಕೋಸ್ ಬಾಟಲಿಯನ್ನು ಹಚ್ಚುತ್ತಾನೆ.

ಮಹಿಳಾ ರೋಗಿಗಳ ವಾರ್ಡಿನಲ್ಲಿ ಹೊರಗಿರುವ ವಾಚ್ ಮನ್ ಒಳ ಬಂದು ಗ್ಲುಕೋಸ್ ಬಾಟಲಿ ಹಚ್ಚುತ್ತಾನೆ ಅಂದ್ರೆ ಈ ಆಸ್ಪತ್ರೆಯ ದುಸ್ಥಿತಿ ಹೇಗಿದೆ ಎಂಬುದನ್ನು ಊಹಿಸಿ. ಇದೇನು ಹೊಸದಲ್ಲಿ ಇಲ್ಲಿ ಕುಡಿಯುವ ನೀರಿನಿಂದ ಹಿಡಿದು ಸ್ವಚ್ಚತಾ ಸಮಸ್ಯೆ, ಕೆಲ ವೈದ್ಯರು ಬಡ ರೋಗಿಗಳಿಂದ ಹಣ ವಸೂಲಿ ಸೇರಿದಂತೆ ಇನ್ನೂ ಹಲವಾರು ಸಮಸ್ಯೆಗಳನ್ನು ಹೊತ್ತಿರುವ ಜಿಲ್ಲಾಸ್ಪತ್ರೆಗೆ ಹೇಳುವವರೂ ಇಲ್ಲ ಕೇಳುವವರೂ ಇಲ್ಲದಂತಾಗಿದ್ದಾರೆ. ಕೂಡಲೇ ಜಿಲ್ಲಾಡಳಿತ ಇತ್ತ ಗಮನಹರಿಸಿ ಈ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳುತ್ತೋ ಕಾದು ನೋಡಬೇಕಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos