ಚಾಲಕ, ನಿರ್ವಾಹಕರಿಗೆ ಶಾಕ್ !

ಚಾಲಕ, ನಿರ್ವಾಹಕರಿಗೆ  ಶಾಕ್ !

ಹುಬ್ಬಳ್ಳಿ ,ಆ. 14 : ಇನ್ಮುಂದೆ ರಾಜ್ಯದ ಎಲ್ಲ ನಾಲ್ಕು ಸಾರಿಗೆ ಸಂಸ್ಥೆಯ ನಿರ್ವಾಹಕರು ಹಾಗೂ ಚಾಲಕರು ಕರ್ತವ್ಯದ ಹಿನ್ನಲೆ ಮೊಬೈಲ್ ಬಳಕೆ ಮಾಡುವಂತಿಲ್ಲ.. ಒಂದು ವೇಳೆ ಅವರ ಬಳಿ ಮೊಬೈಲ್ ಸಿಕ್ಕರೆ, ಮೊಬೈಲ್ ಬಳಸಿದ್ದು ಕಂಡು ಬಂದರೆ ಅಮಾನತು ಶಿಕ್ಷೆ ಕಟ್ಟಿಟ್ಟ ಬುತ್ತಿ. ಪತ್ತೆಯಾದ ಮೊಬೈಲ್ ಮುಟ್ಟುಗೋಲು ಖಚಿತ.

ಚಾಲಕ-ನಿರ್ವಾಹಕರು ಕರ್ತವ್ಯದ ವೇಳೆ ಮೊಬೈಲ್ ಇಟ್ಟುಕೊಳ್ಳುವ ಕುರಿತು ಸಾಕಷ್ಟು ಪರ-ವಿರೋಧಗಳಿದ್ದವು. ಸಂಪರ್ಕ ಸಂವಹನಕ್ಕೆ ಮೊಬೈಲ್ ಅಗತ್ಯ ಎನ್ನುವ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ 2012ರಲ್ಲಿ ಕರ್ತವ್ಯ ವೇಳೆ ಮೊಬೈಲ್ ಇಟ್ಟುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಳಸಲು ಅನುಮತಿ ನೀಡಲಾಗಿತ್ತು. ಈ ಆದೇಶವನ್ನು ಹಿಂಪಡೆದು ಕರ್ತವ್ಯ ವೇಳೆಯಲ್ಲಿ ಮೊಬೈಲ್ ಹೊಂದುವುದನ್ನು ಸಂಪೂರ್ಣ ನಿಷೇಧಿಸಿ ಈಗ ಆದೇಶ ಹೊರಡಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos