ಚಳಿಗಾಲದಲ್ಲಿ ಪಾದಗಳ ರಕ್ಷಣೆ ಮಾಡುವುದು ಹೇಗೆ..?

ಚಳಿಗಾಲದಲ್ಲಿ ಪಾದಗಳ ರಕ್ಷಣೆ ಮಾಡುವುದು ಹೇಗೆ..?

ಮುಖದ ಸೌಂದರ್ಯಕ್ಕೆ ಜನರು ಹೆಚ್ಚಿನ ಮಹತ್ವ ನೀಡ್ತಾರೆ. ಸುಂದರ ಮುಖ ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಮೇಕಪ್, ಪಾರ್ಲರ್ ಒಂದಾ, ಎರಡಾ? ಆದ್ರೆ ನಿಮ್ಮ ಪಾದ ಹೇಗಿದೆ ಅಂತಾ ನೋಡಿಕೊಂಡಿದ್ದೀರಾ..?ಪಾದವು
ದೇಹದ ಒಂದು ಅಂಗವಲ್ಲವೇ?

ಸಾಕಷ್ಟು ಮಂದಿ ಮುಖಕ್ಕೆ ಕೊಡುವ ಮಹತ್ವವನ್ನು ದೇಹದ ಇತರ ಭಾಗಗಳಿಗೆ ನೀಡುವುದಿಲ್ಲ. ಬೇರೆಯವರು ಹೆಚ್ಚಾಗಿ ನೋಡುವುದು ಮುಖವನ್ನ ನಿಜ. ಹಾಗಂತ ಪಾದಗಳ ಬಗ್ಗೆಯೂ ಗಮನ ಹರಿಸದಿದ್ದರೆ
ಹೇಗೆ? ನಿಮ್ಮ ಸೌಂದರ್ಯಕ್ಕೆ ನಿಮ್ಮ ಪಾದಗಳೇ ಕಪ್ಪು ಚುಕ್ಕಿಯಾಗಬಹುದು. ಸೌಂದರ್ಯವೊಂದೆ ಅಲ್ಲ ಪಾದ ಬಿರುಕುಬಿಟ್ಟು ಉರಿಯಾಗುವುದರಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ.

ಅನೇಕರಿಗೆ ಪಾದದ ರಕ್ಷಣೆ ಮಾಡುವುದು ಕಷ್ಟದ ಹಾಗೂ ಪರಿಶ್ರಮದ ಕೆಲಸ. ಉಳಿದ ಕಾಲದಲ್ಲಿ ಬಿಡಿ, ಚಳಿಗಾಲದಲ್ಲಂತೂ ಕಾಲಿನ ಬಗ್ಗೆ ನೀವು ಅಲಕ್ಷ ಮಾಡುವುದು ಸರಿಯಲ್ಲ. ಒಂದು ನಿಂಬೆ ಹಣ್ಣು ನಿಮ್ಮ ಕಾಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಪಾದಗಳು ಚಳಿಗಾಲದಲ್ಲಿ ಒಡೆಯುವುದು ಸಾಮಾನ್ಯ. ಕೆಲವರಿಗೆ ಚರ್ಮ ಬಿರುಕು ಬಿಟ್ಟು ರಕ್ತ ಬರುತ್ತಿರುತ್ತದೆ. ಇಂತವರು ಪಾದವನ್ನು ಸ್ವಚ್ಛಗೊಳಿಸಿ, ನಿಂಬು ರಸವನ್ನು ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು. ಆಲಿವ್ ಆಯಿಲ್ ಕೂಡ ಬಿರುಕಿನ ಸಮಸ್ಯೆಗೆ ಮುಕ್ತಿ ನೀಡುತ್ತದೆ. ಕಂದು ಸಕ್ಕರೆ, ಆಲಿವ್ ಆಯಿಲ್, ನಿಂಬು ರಸ ಬೆರೆಸಿ ಅದನ್ನು ಪಾದಗಳಿಗೆ ಹಚ್ಚುತ್ತ ಬಂದರೆ ಒಳ್ಳೆಯದು.  ನಿಮ್ಮ ಪಾದಗಳ ರಕ್ಷಣೆಗಾಗಿ ಹೀಗೊಮ್ಮೆ ಮಾಡಿ ನೋಡಿ.

ಫ್ರೆಶ್ ನ್ಯೂಸ್

Latest Posts

Featured Videos