ಆಟೊ ಚಾಲಕರಿಗೆ ಪರವಾನಗಿ‌ದೋಖಾ

ಆಟೊ ಚಾಲಕರಿಗೆ ಪರವಾನಗಿ‌ದೋಖಾ

ಬೆಂಗಳೂರು, ಜು. 15 : ಹೊಸದಾಗಿ ಆಟೊ ಪರವಾನಗಿ ಪಡೆಯಲು ಹಿಂಜರರಿಯುತ್ತಿರುವ ಚಾಲಕರು. ಬ್ರೋಕರ್ ಮಾಯಾಜಾಲಕ್ಕೆ ಸಿಲುಕಿ ಹಳೆ ಆಟೊ ಪರವಾನಗಿಗಳನ್ನು 30 ರಿಂದ  35 ಸಾವಿರ ರೂಗಳಿಗೆ  ಕೊಂಡು ಮೋಸ ಹೋಗುತ್ತಿದ್ದಾರೆ.

ನಕಲಿ ಪರವಾನಿಗೆ ತಡೆ ಮತ್ತು ನಿರುದ್ಯೋಗ ನಿವಾರಣೆ ಮಾಡಲು ಉದ್ಯೋಗ ನೀಡುವ ಅವಕಾಶ ಕಲ್ಪಿಸುವ ದ್ಯೇಯದಿಂದ 2018 ಮಾಚ್೯      26ರಂದು 5 ವರ್ಷಗಳಲ್ಲಿ ಮುವತ್ತು ಸಾವಿರ ಆಟೋ ರಿಕ್ಷಗಳ ಪರವಾನಗಿ ವಿತರಿಸಲು ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿ ಪರವಾನಗಿ ನೀಡಲು ಅರ್ಜಿ ಆಹ್ವಾನಿತ್ತು. ಕಳೆದ ಒಂದು ವರ್ಷದಲ್ಲಿ ಕೇವಲ 2-3 ಸಾವಿರ ಅರ್ಜಿಗಳಷ್ಟೆ ಸಲ್ಲಿಕೆ ಆಗಿರಲು ಕಾರಣ ಏಜಂಟರ ದಂಧೆಯೇ ಕಾರಣ.

ಖಾಸಗಿ ಲೇವಾದೇವಿದಾರರು,ಆರ್ ಟಿ ಓ ಕಛೇರಿ ಬಳಿಯ ಮದ್ಯವರ್ತಿಗಳು ಮತ್ತು ಆಟೊಕನ್ಸಲ್ಟ್ಂಟ್ ಸುವ್ಯವಸ್ಥಿತ ಕುತಂತ್ರವೇ ಆಟೊ ಚಾಲಕರು ಹೊಸ ಪರ್ಮಿಟ್ ಪಡೆಯಲು ಹಿಂದೆ ಸರಿಯುತ್ತಿದ್ದಾರೆ. ಹಳೆಯ ಆಟೊರಿಕ್ಷ ಪರವಾನಗಿಯನ್ನು ಖರೀದಸಿ ತಮ್ಮ ಹೆಸರಿಗೆ ವರ್ಗಾವಣೆ  ಮಾಡಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಇದನ್ನೆ ಬಳಸಿಕೊಂಡು ತಮ್ಮ ಬಂಡವಾಳವಾಗಿಸಿಕೊಂಡಿರುವ ಏಜೆಂಟರುಗಳು, ಸಾಲಗಾರರು ಜಪ್ತಿ ಮಾಡಿಟ್ಟುಕೊಂಡಿರುವ, ದುರಸ್ತಿ ಮಾಡಿಸದೆ ಮೂಲೆ ಸೇರಿರುವ ಮತ್ತು ಎರಡು ಸ್ಟ್ರೋಕ್ ಆಟೊಗಳ ಪರವಾನಗಿಯನ್ನು 30- 35 ಸಾವಿರಗಳಿಗೆ ಮಾರಾಟ ಮಾಡುತ್ತಿದ್ದಾರೆ.

ಇದರಿಂದಾಗಿ ಹೊಸ ಪರವಾನಗಿಗಳಿಗೆ ಬೆಲೆ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಪರವಾನಗಿ ವರ್ಗಾವಣೆ ಸ್ಥಗಿತಗೊಳಿಸುತ್ತಾರೆಂಬ ವದಂತಿಯನ್ನ ವ್ಯವಸ್ಥಿತ ವಾಗಿ ಹಬ್ಬಿಸಿ ಅಮಾಯಕ ಚಾಲಕರನ್ನ ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ.

ಆರ್ ಟಿ ಓ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆಟೊ ಚಾಲಕರ ಸಂಘದ ಸದಸ್ಯರೊಬ್ಬರು ತಿಳಿಸಿದರು.

ಡಿಎಲ್, ಆಧಾರ್ ಮತ್ತು ಇತರೆ ದಾಖಲೆಗಳೊಂದಿಗೆ 500 ರೂ ಶುಲ್ಕ ಪಾವತಿಸಿ ಹೊಸ ಪರವಾನಗಿ ಪಡೆದು ಕೊಳ್ಳಬಹುದು. ಆಟೊಗಳ ಸಾಮರ್ಥ್ಯ ಪ್ರಮಾಣಪತ್ರ , ಡಿಎಲ್ ನವೀಕರಣಕ್ಕೆ ಕಛೇರಿಗೆ ಹೋದರೆ ಸಿಬ್ಬಂದಿಗಳು ಕ್ಯಾರೆ ಎನ್ನುವುದಿಲ್ಲ. ಅದೇ ಏಜೆಂಟರುಗಳೊಂದಿಗೆ ಹೋದರೆ ನಿಮಿಷಾರ್ಧದಲ್ಲಿ ಎಲ್ಲವೂ ಸಲೀಸಾಗಿ ಆಗುತ್ತದೆ.

ಬ್ರೋಕರಗಳ ಮೂಲಕವೇ ಅಧಿಕಾರಿಗಳನ್ನ ಸಂಪರ್ಕ ಮಾಡಬೇಕು ಎಂಬ ಶಾಸನಬದ್ದ ನಿಯಮ ಮಾಡಿಕೊಂಡಿದ್ದಾರೆಂದೇ ಹೇಳಿದರೆ ತಪ್ಪಾಗಲಾರದು.

ನಗರದಲ್ಲಿ ಎರಡು ಲಕ್ಷ ಆಟೋಗಳು

ಸಾರಿಗೆ ಇಲಾಖೆ ಈವರೆಗೆ 1.25 ಲಕ್ಷ ಆಟೊ ರಿಕ್ಷ ಪರವಾನಗಿ ವಿತರಣೆ ಮಾಡಿದೆ 2019 ಜನವರಿಗೆ ನೊಂದಣಿ ಆಗಿರುವ ಆಟೊಗಳ ಸಂಖ್ಯೆ 2.00.972. ಆಟೊ ಚಾಲಕರಿಂದ ಹಸಾದಾಗಿ ಬಂದಿರುವ ಅರ್ಜಿ ಸಂಖ್ಯೆ ಕೇವಲ 3 ಸಾವಿರ ಇದರಲ್ಲಿ ಕೆಲವರಿಗೆ ಪರವಾನಗಿ ವಿತರಿಸಲಾಗಿದೆ.

ಪರವಾನಗಿ ಇಲ್ಲದೆ ಹೊಸ ಆಟೊ ಖರೀದಿ ಮಾಡಿ  ಇಂದಿರಾನಗರ, ಜಯನಗರ, ಕೋರಮಂಗಲ, ಇತರೆಡೆಗಳಲ್ಲಿ ಆರ್ಟಿಓ ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಕಳೆದೊಂದು ವರ್ಷದಲ್ಲಿ ಏಳೆಂಟುಸಾವಿರ ಆಟೊಗಳು ನೊಂದಣಿ ಆಗಿವೆ. ಪರವಾನಗಿ ಪಡೆದ ನಂತರವೇ ಪ್ರಯಾಣಿಕರಿಗೆ ಸೇವೆ ಒದಗಿಸಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಆದರೆ ಕೆಲವು ಆಟೊಗಳುನಿಯಮ ಉಲ್ಲಂಘನೆ ಮಾಡುತ್ತಿರವ ಬಗ್ಗೆ ದೂರುಗಳು ದಾಖಲಾಗಿ ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು, ಆಟೊಗಳ ನಕಲಿ ಪರವಾನಗಿ ಹಾವಳಿ ತಪ್ಪಿಸಲು ಜಾರಿಗೊಳಿಸಿರುವ ಇ- ಪರವಾನಗಿ ವ್ಯವಸ್ಥೆ ಇನ್ನೂ ಜಾರಿಗೊಂಡಿಲ್ಲ. ಪರವಾನಗಿಗೆ ಆಧಾರ್ ಜೋಡಿಸುವ ಪ್ರಕ್ರಿಯೆ ಸ್ಥಗಿತ ಗೊಂಡಿದೆ ಒಂದೇ ಪರವಾನಗಿಯಲ್ಲಿ ನಲ್ಕೈದು ಆಟೊಗಳು ಓಡಾಡುತ್ತಿರುವ ಬಗ್ಗೆ ದೂರುಗಳಿವೆ ಎಂದು ತಿಸಿದರು.

ಹೊಸ ಮತ್ತು ಹಳೆಯ ಪರವಾನಗಿಗಳ ನಡುವೆ ಏನೂ ವೆತ್ಯಾಸ ಇಲ್ಲ. ಆದರೆ ಖಾಸಗಿ ಲೇವಾದೇವಿದಾರರು ,ಮಧ್ಯವರ್ತಿಗಳು ಚಾಲಕರನ್ನು ಯಾಮಾರಿಸಿ ಮೋಸ ಮಾಡುತ್ತಿದ್ದಾರೆ ಇದರಿಂದ ಚಾಲಕರು ಆದಷ್ಟು ಜಾಗರೂಕರಾಗಿರ ಬೇಕು ಎಂದು ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಅವರ ಅಭಿಪ್ರಾಯ.

ಫ್ರೆಶ್ ನ್ಯೂಸ್

Latest Posts

Featured Videos