ಸರಣಿ ಅಪಘಾತ

ಸರಣಿ ಅಪಘಾತ

ಬೆಂಗಳೂರು, ಜ. 11 : ಜಯನಗರದ ಈಸ್ಟ್ ಎಂಡ್ ಸರ್ಕಲ್ ಸಮೀಪ ಬಿಎಂಟಿಸಿ ವೋಲ್ವೋ ಬಸ್ ಅಡ್ಡಾದಿಡ್ಡಿ ಚಲಿಸಿ ಸರಣಿ ಅಪಘಾತ ಸಂಭವಿಸಿದ್ದು, ಐದು ವಾಹನಗಳು ಜಖಂಗೊಂಡಿವೆ.
ಶುಕ್ರವಾರ ಮಧ್ಯಾಹ್ನ 1 ಗಂಟೆಯಲ್ಲಿ ಬಿಎಂಟಿಸಿ ವೋಲ್ವೋ ಬಸ್ ಮೆಜೆಸ್ಟಿಕ್ನಿಂದ ಜಯನಗರ ಮಾರ್ಗವಾಗಿ ಎಚ್ಎಸ್ಆರ್ ಲೇಔಟ್ಗೆ ತೆರಳುತ್ತಿದ್ದಾಗ ಈಸ್ಟ್ ಎಂಡ್ ಸರ್ಕಲ್ ಬಳಿಯ ರೆಡ್ಡಿ ನರ್ಸಿಂಗ್ ಹೋಂ ಮುಂಭಾಗದಲ್ಲಿ ಅಡ್ಡಾದಿಡ್ಡಿ ಚಲಿಸಿ ಮುಂದೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದ್ದು, ನಾಲ್ಕು ಕಾರುಗಳು ಸಂಪೂರ್ಣ ಜಖಂಗೊಂಡಿವೆ.
ಈ ಕುರಿತು ಸ್ಥಳೀಯರು ‘ನಮ್ಮ 100’ ಮೂಲಕ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಮೈಕೋ ಲೇಔಟ್ ಸಂಚಾರ ಠಾಣೆ ಪೊಲೀಸರು ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದರು. ಜಖಂಗೊಂಡಿದ್ದ ವಾಹನಗಳನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅಪಘಾತದ ವೇಳೆ ಬಸ್ ಕಡಿಮೆ ವೇಗದಲ್ಲಿತ್ತು.

ಫ್ರೆಶ್ ನ್ಯೂಸ್

Latest Posts

Featured Videos