ಚಾಹಾಲ್, ಕುಲದೀಪ್ ಬೌಲಿಂಗ್‌ ಪಡೆಯ ಆಧಾರಸ್ತಂಭ : ಕೊಹ್ಲಿ

ಚಾಹಾಲ್, ಕುಲದೀಪ್ ಬೌಲಿಂಗ್‌ ಪಡೆಯ ಆಧಾರಸ್ತಂಭ : ಕೊಹ್ಲಿ

ಮುಂಬಯಿ, ಮೇ.23, ನ್ಯೂಸ್ಎಕ್ಸ್ ಪ್ರೆಸ್‍ : ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್‌ ಮತ್ತು ಕುಲದೀಪ್‌ ಯಾದವ್‌ ನಮ್ಮ ಬೌಲಿಂಗ್‌ ಪಡೆಯ ಆಧಾರಸ್ತಂಭ ಎಂದು ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಕುಲದೀಪ್‌ 44 ಪಂದ್ಯಗಳಲ್ಲಿ 87 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಚಾಹಲ್‌ 41 ಪಂದ್ಯಗಳಲ್ಲಿ 72 ವಿಕೆಟ್‌ಗಳನ್ನು ಪಡೆದಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚಿನ ಯಶಸ್ಸು ಸಾಧಿಸಿರುವ ಕುಲದೀಪ್‌ ಯಾದವ್‌  ಮುಂದಿನ ವಿಶ್ವಕಪ್‌ನಲ್ಲಿ ಅವರು ಮತ್ತಷ್ಟು ಪ್ರಬಲವಾಗಿ ಮೂಡಿಬರಲಿದ್ದಾರೆ ಎಂದು ಕೊಹ್ಲಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ ಇನ್ನೂ ಭುಜದ ನೋವಿನಿಂದ ಬಳಲುತ್ತಿದ್ದ ಆಲ್‌ರೌಂಡರ್‌ ಕೇದಾರ್‌ ಜಾಧವ್‌ ಬಗ್ಗೆ ಯಾವುದೇ ಆತಂಕವಿಲ್ಲ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಕೊಹ್ಲಿ ಸ್ಪಷ್ಟನೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos