ಕೇಂದ್ರ ನಿರುದ್ಯೋಗದ ದತ್ತಾಂಶ ಮುಚ್ಚಿಡಬಹುದೇ ವಿನಃ ಸತ್ಯವನ್ನಲ್ಲ; ಕೌಶಿಕ್ ಬಸು

ಕೇಂದ್ರ ನಿರುದ್ಯೋಗದ ದತ್ತಾಂಶ ಮುಚ್ಚಿಡಬಹುದೇ ವಿನಃ ಸತ್ಯವನ್ನಲ್ಲ; ಕೌಶಿಕ್ ಬಸು

ನವದೆಹಲಿ, ಮಾ.20, ನ್ಯೂಸ್ ಎಕ್ಸ್ ಪ್ರೆಸ್: ವಿಶ್ವಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞ ಮತ್ತು ಭಾರತ ಸರ್ಕಾರದ ಮಾಜಿ ಆರ್ಥಿಕ ಸಲಹೆಗಾರ ಕೌಶಿಕ್ ಬಸುರವರು ನಿರುದ್ಯೋಗದ ಸಮಸ್ಯೆಯ ಬಗ್ಗೆ ಭಾರತದ ಕೇಂದ್ರ ಸರ್ಕಾರ ಸಮರ್ಪಕವಾಗಿ ಗಮನ ನೀಡಿಲ್ಲದಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ ಎಂದು ತಮ್ಮ ನ್ಯೂಯಾರ್ಕ ಟೈಮ್ಸ್ ಪತ್ರಿಕೆಗೆ ಬರೆದ ಅಂಕಣದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ನರೆಂದ್ರ ಮೋದಿ ಸರ್ಕಾರವು ಕೆಲವೇ ಜನರ ಬೃಹತ್ ಉದ್ಯಮದತ್ತ ಗಮನ ಹರಿಸಿದೆಯೇ ಹೊರತು ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಲ್ಲಿ ಹಾಗೂ ಕೃಷಿ ಕ್ಷೇತ್ರದಲ್ಲಿ ಸೃಷ್ಟಿಸಬಹುದಾಗಿದ್ದ ಉದ್ಯೋಗಗಳ ಬಗ್ಗೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ನರೆಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಂದ್ರ ಸರ್ಕಾರವು ಅಧಿಕೃತವಾದ ಸರ್ಕಾರಿ ಅಂಕಿ-ಅಂಶಗಳನ್ನು ಮುಚ್ಚಿಟ್ಟ ಕಾರಣ ಭಾರತದಲ್ಲಿ ನಿರುದ್ಯೋಗದ ಸಮಸ್ಯೆಯನ್ನು ವಿಶ್ಲೇಷಿಸಲು ಆರ್ಥಿಕ ತಜ್ಞರು ಖಾಸಗಿ ಮತ್ತು ಪರೋಕ್ಷ ಮೂಲಗಳನ್ನು ಅವಲಂಬಿಸಬೇಕಾಗಿದೆ ಎಂದು ತಮ್ಮ ಅಂಕಣದಲ್ಲಿ ದೂರಿದ್ದಾರೆ.

ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ಹೇಳಿದಂತೆ ನೋಟು ನಿಷೇಧದ ನಂತರ ಒಂದು ವರ್ಷದ ಅವಧಿಯಲ್ಲಿ (2017-2018) ದಾಖಲಾದ 6.1% ರಷ್ಟು ನಿರುದ್ಯೋಗ ದರದ ಪ್ರಮಾಣ ಕಳೆದ ೪೫ ವರ್ಷಗಳಲ್ಲೇ ಅತಿ ಹೆಚ್ಚಿನದಾಗಿದೆ. ನಿರುದ್ಯೋಗಕ್ಕೆ ಸಂಬಂಧಿಸಿದ ವರದಿಯನ್ನು ಸಿದ್ದಪಡಿಸಿದ್ದ ಕೇಂದ್ರ ಸಾಂಖ್ಯಿಕ ಆಯೋಗದ ಇಬ್ಬರು ಸ್ವತಂತ್ರ ಸದಸ್ಯರು ಸಕಾರ ಈ ಮಾಹಿತಿಯನ್ನು ಪ್ರಕಟಿಸಲು ತಡೆಹಿಡಿದ ಕಾರಣಕ್ಕೆ ರಾಜೀನಾಮೆ ನೀಡಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

ಸಾಂಖ್ಯಿಕವಾದ ದತ್ತಾಂಶ ಸಂಗ್ರಹಣೆಯಲ್ಲಿ ಜಾಗತಿಕವಾಗಿ ಪ್ರಶಂಸೆಗೆ ಪಾತ್ರವಾಗಿದ್ದ ಸಂಸ್ಥೆಯೊಂದು ಸಿದ್ದಪಡಿಸಿದ್ದ ವರದಿಯನ್ನು ಮುಚ್ಚಿಟ್ಟಿರುವುದು ಭಾರತದ ಮಟಿಗೆ ಅಸಾಧರಣವಾದುದು. ಸರ್ಕಾರಿ ದತ್ತಾಂಶದ ಅನುಪಸ್ಥಿತಿಯಲ್ಲಿ ಸೆಂಟರ್ ಫಾರ್ ಮಾನಿಟರಿಂಗ್ ಆಫ್ ಇಂಡಿಯನ್ ಎಕಾನಮಿ ಮತ್ತು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯ ಸಂಶೋಧನಾ ವರದಿಗಳು ಭಾರತದಲ್ಲಿನ ನಿರುದ್ಯೋಗದ ಭೀಕರತೆಯ ಬಗ್ಗೆ ಮಾಹಿತಿ ಚೆಲ್ಲುತ್ತಿವೆ ಎಂದಿದ್ದಾರೆ.

ಈ ನಿರುದ್ಯೋಗದ ಭೀಕರತೆ ಆಕಸ್ಮಿಕವೇನಲ್ಲ. ದೇಶದ ಆರ್ಥಿಕತೆಯ ಹಳಿ ತಪ್ಪಿಸಿದ ನೋಟು ನಿಷೇಧ ಮತ್ತು ಜಿ.ಎಸ್.ಟಿ ಯ ಅಸಮರ್ಪಕ ಜಾರಿಯ ಉತ್ಪನ್ನ ಇದು ಕೌಶಿಕ್ ಬಸು ತಮ್ಮ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos