ರೈತರಿಗೆ, ಭೂರಹಿತರಿಗಾಗಿ ಈ ಬಜೆಟ್ನಲ್ಲಿ ಏನೂ ಇಲ್ಲ: ಒಡಿಶಾ ಸಿಎಂ

ರೈತರಿಗೆ, ಭೂರಹಿತರಿಗಾಗಿ ಈ ಬಜೆಟ್ನಲ್ಲಿ ಏನೂ ಇಲ್ಲ: ಒಡಿಶಾ ಸಿಎಂ

ಭುವನೇಶ್ವರ್​: ಒಡಿಶಾ ಮುಖ್ಯಮಂತ್ರಿ ನವೀನ್​
ಪಟ್ನಾಯಕ್​ ನಿನ್ನೆ ಮಂಡನೆಯಾದ ಮಧ್ಯಂತರ
ಯೂನಿಯನ್​ ಬಜೆಟ್​ ನಿರಾಶದಾಯಕವಾಗಿತ್ತು ಎಂದಿದ್ದಾರೆ.

ಅಲ್ಲದೇ
ಈ ಬಾರಿಯ ಬಜೆಟ್​ಗೆ  10ಕ್ಕೆ
2.5 ಅಂಕಗಳನ್ನ ಕೊಡ್ತೀನಿ ಅಂತ ಹೇಳಿದ್ದಾರೆ. ಮಧ್ಯಮ
ವರ್ಗದವರಿಗೆ ಮತ್ತು ಕಡಿಮೆ ಆದಾಯವುಳ್ಳ ವರ್ಗದವರ ತೆರಿಗೆ
ರಿಯಾಯಿತಿ ಮತ್ತು ರೈತರ ನೀಡಿರುವ
ಯೋಜನೆಗಳನ್ನ ಸ್ವಾಗತಿಸಿದ್ದಾರೆ.

ಆದರೆ, ಈ ಬಾರಿಯ ಬಜೆಟ್​
ನಿರಾಸೆ ಮೂಡಿಸಿದೆ ಎಂದು ಹೇಳಿದ್ದಾರೆ. ಒಡಿಶಾ ಸರ್ಕಾರ ಡಿಸೆಂಬರ್​ನಲ್ಲಿ ಜಾರಿ ಮಾಡಿರೋ
ಯೋಜನೆಯಡಿಯಲ್ಲಿ​ ಅಡಿಯಲ್ಲಿ ರೈತರಿಗೆ ವರ್ಷಕ್ಕೆ 10,000 ಸಾವಿರ
ರೂಪಾಯಿಗಳನ್ನ ನೀಡ್ತಿದೆ ಎಂದು ರಾಜ್ಯ ಸರ್ಕಾರದ
ಯೋಜನೆಯನ್ನ ತಿಳಿಸಿದರು.

ರೈತರಿಗೆ,
ಭೂರಹಿತರಿಗಾಗಿ ಈ ಬಜೆಟ್​ನಲ್ಲಿ
ಏನು ಇಲ್ಲಾ ಎಂದು ಕೇಂದ್ರದ
ವಿರುದ್ಧ ಗುಡುಗಿದ್ದಾರೆ. ಹೀಗಾಗಿ ಈ ಬಾರಿಯ
ಬಜೆಟ್​ಗೆ ನಾನು 10ಕ್ಕೆ
2.5 ಅಂಕಗಳನ್ನಷ್ಟೇ ಕೊಡ್ತೀನಿ ಎಂದು ಹೇಳಿದ್ದಾರೆ.

ಬಜೆಟ್​ನಲ್ಲಿ ಮಂಡನೆಯಾದ ವಯಸ್ಸಾದವರ
ಪಿಂಚಣಿ ಯೋಜನೆ​ಲ್ಲೂ ಕೂಡ
ನಿರಾಸೆಯಾಗಿದೆ. ಒಡಿಶಾ ರಾಜ್ಯದಲ್ಲಿ ಪಿಂಚಣಿ
ಸೌಲಭ್ಯವನ್ನ ಒಟ್ಟು 40 ಲಕ್ಷ ಜನ ಪಡೆಯುತ್ತಿದ್ದು,
ತಿಂಗಳಿಗೆ 500 ರೂಪಾಯಿ ಮಾಸಾಶನ ನೀಡಲಾಗುತ್ತಿದೆ.

ಆದರೆ, ಕೇಂದ್ರ ಇಡೀ ದೇಶದಲ್ಲಿ
ಒಟ್ಟು 20 ಲಕ್ಷ ಜನರಿಗೆ ಪಿಂಚಣಿ
ಸೌಲಭ್ಯ ನೀಡ್ತಿದ್ದು, ತಿಂಗಳಿಗೆ ಕೇವಲ 200 ರೂಪಾಯಿಗಳನ್ನ ನೀಡ್ತಿದೆ ಎಂದು ಮೋದಿ ಸರ್ಕಾರದ
ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos