ಹುಕ್ಕಾ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ

ಹುಕ್ಕಾ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ

ಬೆಂಗಳೂರು: ರಾಜ್ಯದಲ್ಲಿ ಹುಕ್ಕಾ ನಿಷೇದ ಜಾರಿಯಾದಾಗಿಂದಲು ಕದ್ದು ಮುಚ್ಚಿ ಹುಕ್ಕಾ ನಡೆಸುತ್ತಿದ್ದ ಅಂಗಡಿ ಮೇಲೆ ಇಂದು ಏಕಾಎಕಿ  ಸಿಸಿಬಿ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಅಷ್ಟೆ ಅಲ್ಲದೆ  12.5 ಲಕ್ಷ ಮೌಲ್ಯದ ಹುಕ್ಕಾ ಫ್ಲೇವರ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಆದೇಶ ಜಾರಿಯಲ್ಲಿದ್ದರು ಸಹ ಆದೇಶ ಉಲ್ಲಂಘಿಸಿ ಮಹಾಲಕ್ಷ್ಮಿ ಲೇಔಟ್, ಎಚ್‍ಎಎಲ್ ಮತ್ತು ಕೆಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಾನೂನು ಬಾಹಿರವಾಗಿ ಹುಕ್ಕಾಬಾರ್ ನಡೆಸುತ್ತಿದ್ದವರ ವಿರುದ್ಧ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.

ಮಹಾಲಕ್ಷ್ಮಿ ಲೇಔಟ್‍ನಲ್ಲಿ ಇಬ್ಬರನ್ನು ವಶಕ್ಕೆ ಪಡೆದು 2 ಲಕ್ಷ ಮೌಲ್ಯದ ಐದು ಹುಕ್ಕಾ ಪಾಟ್‍ಗಳು, ಹುಕ್ಕಾ ಫ್ಲೇವರ್‍ಗಳು, ಚಾರ್‍ಕೋಲ್‍ಬಾಕ್ಸ್ ಮತ್ತು ಹುಕ್ಕಾ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಚ್‍ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ತೆರೆಯಲಾಗಿದ್ದ ಹುಕ್ಕಾ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದು 10 ಲಕ್ಷ ಮೌಲ್ಯದ 710 ಹುಕ್ಕಾ ಫ್ಲೇವರ್‍ಗಳು, ಹುಕ್ಕಾ ಪ್ಯಾಕೆಟ್-36 ಸೆಟ್, ಫಾಯಿಲ್ ಪೇಪರ್- 28 ಬಾಕ್ಸ್, ಫಿಲ್ಟರ್‍ಗಳು-19, ಹುಕ್ಕಾ ಪೈಪ್-25 ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.

ಕೆಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂವರನ್ನು ವಶಕ್ಕೆ ಪಡೆದು ಮೂರು ಹುಕ್ಕಾ ಫ್ಲೇವರ್‍ಗಳು, ಐದು ಹುಕ್ಕಾ ಪಾಟ್ ಸೆಟ್ ಹಾಗೂ ನಗದು ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ 50 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos