ಸಿಸಿ ಕ್ಯಾಮೆರಾ ಬಂತು ಕರಾವಳಿ ರೈಲಿಗೂ

ಸಿಸಿ ಕ್ಯಾಮೆರಾ ಬಂತು ಕರಾವಳಿ ರೈಲಿಗೂ

ಮಂಗಳೂರು, ಆ.6 : ಸಿಸಿ ಕ್ಯಾಮೆರಾ ಕರಾವಳಿಯ ರೈಲು ಬೋಗಿಗಳಿಗೆ ಇರಲಿಲ್ಲ. ಇದೀಗ ಸುರಕ್ಷತೆ ಕಾಯ್ದುಕೊಳ್ಳುವ ಹಿನ್ನೆಲೆ ಎಲ್ಲ ವಿಧದ ರೈಲು ಬೋಗಿಗಳಿಗೆ ಸಿಸಿ ಕ್ಯಾಮರಾ ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಕರಾವಳಿ ಕೊಂಕಣ ರೈಲ್ವೆ ವ್ಯಾಪ್ತಿಯ ಜನದಟ್ಟಣೆ ಹೊಂದಿರುವ ಕೊಂಕಣ-ಕನ್ಯಾ ಮಾಂಡೋವಿ ಎಕ್ಸ್ಪ್ರೆಸ್ ಹಾಗೂ ಸಿಎಸ್ಟಿ-ಮಡ್ಗಾಂವ್ ಎಕ್ಸ್ಪ್ರೆಸ್ ರೈಲಿನ ಬೋಗಿಗಳಿಗೆ ಈಗಾಗಲೇ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ರೈಲುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ ಬಳಿಕ ಕಳೆದ ಮೂರು ತಿಂಗಳಲ್ಲಿ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಎಲ್ಎಚ್ಬಿ ಕೋಚ್ ಹೊಂದಿರುವ ರೈಲುಗಳಲ್ಲಿ 36 ಸ್ಲೀಪರ್ ಕೋಚ್ಗಳಿವೆ. ಎಲ್ಲ ಸ್ಲೀಪರ್ ಕೋಚ್ಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ರೈಲ್ವೆ ಕೋಚ್ನ್ನು ಪ್ರವೇಶಿಸುವ ಮೇಲ್ಭಾಗದಲ್ಲಿ ಹಾಗೂ ಸ್ಲೀಪರ್ ಕೋಚ್ನ ಕಾರಿಡಾರ್ಗಳಲ್ಲಿ ಸಿಸಿ ಕ್ಯಾಮೆರಾ ಹಾಕಲಾಗಿದೆ. ಕ್ಯಾಮರಾ ಸೆರೆಹಿಡಿಯುವ ದೃಶ್ಯಾವಳಿ ರೈಲಿನಲ್ಲೇ ಪ್ರತ್ಯೇಕವಾಗಿ ರೂಪಿಸಿದ ಕಂಟ್ರೋಲ್ ರೂಂ ಮಾದರಿಯ ವ್ಯವಸ್ಥೆಯಲ್ಲಿ ಸಂಗ್ರಹಗೊಳ್ಳುತ್ತವೆ.

ಫ್ರೆಶ್ ನ್ಯೂಸ್

Latest Posts

Featured Videos