ಮಾಜಿ ಕ್ರಿಕೆಟರ್ ಮೇಲೆ ಪ್ರಕರಣ ದಾಖಲು

ಮಾಜಿ ಕ್ರಿಕೆಟರ್ ಮೇಲೆ ಪ್ರಕರಣ ದಾಖಲು

ನವದೆಹಲಿ, ಅ. 18: ಮಾಜಿ ಕ್ರಿಕೆಟ್ ಆಟಗಾರ ಮನೋಜ್ ಪ್ರಭಾಕರ್ ಹಾಗೂ ಕುಟುಂಬದ ವಿರುದ್ಧ ದೆಹಲಿ ಪೊಲೀಸರು ವಂಚನೆ, ಪ್ರಕರಣವನ್ನು ದಾಖಲಿಸಿದ್ದಾರೆ.

ದಕ್ಷಿಣ ದೆಹಲಿಯ ಸರ್ವಪ್ರಿಯ ವಿಹಾರದಲ್ಲಿನ ಅಪಾರ್ಟ್ ಮೆಂಟ್ ನ ಎರಡನೇ ಅಂತಸ್ತಿನಲ್ಲಿ ಫ್ಲಾಟ್  ಹೊಂದಿರುವುದಾಗಿ ತಿಳಿಸಿರುವ ಸಂಧ್ಯಾ ಶರ್ಮಾ, ಮೊದಲ ಅಂತಸ್ತಿನಲ್ಲಿದ್ದ  ಪ್ರಭಾಕರ್ ಹಾಗೂ ಅವರ ಕುಟುಂಬದವರು ಅಕ್ರಮವಾಗಿ ತಮ್ಮ  ಮನೆಗೆ ನುಗ್ಗಿ ವಾಸಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷ ಸಂಬಂಧಿಕರು ಫ್ಲಾಟ್ ತೊರದಿದ್ದು, ಆಗಿನಿಂದಲೂ ಬೀಗ ಹಾಕಲಾಗಿತ್ತು.  ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಗೆ ಬಂದು ಫ್ಲಾಟ್ ಗೆ ಹೋಗಲು ಪ್ರಯತ್ನಿಸಿದಾಗ ಅದನ್ನು ಅತಿಕ್ರಮಿಸಿಕೊಂಡವರಿಂದ ಪ್ರವೇಶ ನಿರಾಕರಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರಭಾಕರ್ ಮತ್ತಿತರಿಂದ ತ್ಮ ಫ್ಲಾಟ್ ನ್ನು ಅತಿಕ್ರಮಿಸಿಕೊಳ್ಳಲಾಗಿದೆ ಎಂದು ಆ ಮಹಿಳೆ ದೂರಿದ್ದು, ಪ್ರಭಾಕರ್ ಅವರನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos