ಚಳಿಗಾಲದಲ್ಲಿ ಶಿಶುವಿನ ಆರೈಕೆ

ಚಳಿಗಾಲದಲ್ಲಿ ಶಿಶುವಿನ ಆರೈಕೆ

ಮಕ್ಕಳ ತ್ವಚೆ ಸೂಕ್ಷ್ಮವಾಗಿರುವುದರಿಂದ ನೈಸರ್ಗಿಕ ಬದಲಾವಣೆಗಳಿಗೆ
ಬಹಳ ಬೇಗ ಪ್ರತಿಕ್ರಿಯಿಸುತ್ತದೆ. ಮೊದಲನೇ ಮಗುವಾಗಿದ್ದರೆ ತಂದೆ ತಾಯಿಗೆ ಮಗುವಿನ ಆರೈಕೆ ಮಾಡುವುದು
ಸ್ವಲ್ಪ ಕಷ್ಟ. ಮಕ್ಕಳು ಚಳಿಗಾಲದಲ್ಲಿ ಚೆನ್ನಾಗರಬೇಕು, ಆರೋಗ್ಯವಾಗಿರಬೇಕು ಅಂದ್ರೆ ಈ ಸಿಂಪಲ್ ಟಿಪ್ಸ್ಗಳನ್ನು
ಪಾಲಿಸಿ..

ಸ್ನಾನ ಹೀಗಿರಲಿ: ಮಗುವಿನ ರ‍್ಮಕ್ಕೆ ಅತಿಯಾಗಿ ಸೋಪ್ ಬಳಸಬೇಡಿ. ಚಳಿಗಾಲದಲ್ಲಿ ರ‍್ಮ ಬಹುಬೇಗ ಒಣಗುವುದರಿಂದ ಸೋಪ್ ಹಚ್ಚಿ ತುಂಬಾ ಹೊತ್ತು ಹಾಗೇ ಬಿಡಬೇಡಿ. ಇದರಿಂದ ಮಕ್ಕಳಲ್ಲಿ ಇರಿಟೇಷನ್ ಉಂಟಾಗಬಹುದು. ಅಲ್ಲದೇ ಬಹಳ ಸಮಯದವರೆಗೆ ಸ್ನಾನ ಮಾಡಿಸುವುರಿಂದ ರ‍್ಮ ಓವರ್​ಹೈಡ್ರೇಟ್ ಆಗುವ ಸಾಧ್ಯತೆ ಇದೆ. ಹೀಗಾಗಿ ತ್ವರಿತವಾಗಿ ಸ್ನಾನ ಮುಗಿಸಿ. ಸ್ನಾನದ ಅವಧಿ ೫ ನಿಮಿಷ ಮೀರದಂತೆ ನೋಡಿಕೊಳ್ಳಿ.

Cute little baby boy taking bath playing with foam and colorful rubber duck toys in a white sunny bathroom

ತೇವಾಂಶ ಕಾಪಾಡಿ: ಮಗುವಿನ ರ‍್ಮ ಯಾವಾಗಲೂ ತೇವದಿಂದ ಕೂಡಿರುವಂತೆ ನೋಡಿಕೊಳ್ಳಿ. ಸ್ನಾನವಾದ ಕೆಲ ಸಮಯದ ನಂತರ ಮಾಯಿಸ್ಚರೈಸರ್ ಬಳಸಿ. ತೆಂಗಿನ ಎಣ್ಣೆ, ಆಲಿವ್ ಎಣ್ಣೆ, ಬಾದಾಮಿ ಎಣ್ಣೆ ಹಾಗೂ ಒಮೇಗಾ ೩, ವಿಟಮಿನ್ ಇ ಸಮೃದ್ಧವಾಗಿರುವ ಮಾಯಿಸ್ಚರೈಸಿಂಗ್ ಕ್ರೀಮ್ ಮಗುವಿನ ರ‍್ಮಕ್ಕೆ ಬೇಕಾದ ಪೋಷಕಾಂಶಗಳನ್ನ ನೀಡುತ್ತದೆ.

ಒಣಗಾಳಿಯಿಂದ ರಕ್ಷಣೆ: ಚಳಿಗಾಲದ ಒಣಗಾಳಿ ಮಕ್ಕಳ ತ್ವಚೆಯನ್ನ ಶುಷ್ಕಗೊಳಿಸುತ್ತದೆ. ಇದರಿಂದ ತುಟಿ ಒಡೆಯುವುದು, ಗಂಟಲು ನೋವು, ಮೂಗಿನ ಸೋಂಕುಗಳು ಉಂಟಾಗುತ್ತವೆ. ಮಗುವಿನ ತ್ವಚೆಯಲ್ಲಿ ತೇವಾಂಶವನ್ನ ಕಾಪಾಡಿಕೊಳ್ಳಲು ಮಗು ಮಲಗುವ ಕೋಣೆಯಲ್ಲಿ ಹ್ಯುಮಿಡಿಫೈರ್ ಅಥವಾ ಒಣಗಾಳಿಯನ್ನು ತೇವಗೊಳಿಸುವ ಸಾಧನವನ್ನ ಬಳಸಿ.

ದೇಹವನ್ನು ಬೆಚ್ಚಗಿರಿಸಿ: ಚಳಿಗಾಲದಲ್ಲಿ ನೆಗಡಿ, ಕೆಮ್ಮು ಹಾಗೂ ಜ್ವರದಂತಹ ಸಮಸ್ಯೆಗಳಿಂದ ಮಗುವನ್ನು ಕಾಪಾಡಲು ವುಲನ್ ಅಥವಾ ಕಾಟನ್ ಬಟ್ಟೆ ಬಳಸಿ. ತಲೆಗೆ ವುಲ್ಲನ್ ಕ್ಯಾಪ್ ಹಾಗೂ ಪಾದಗಳಿಗೆ ಸಾಕ್ಸ್ ಹಾಕಿ ದೇಹವನ್ನ ಆದಷ್ಟು ಬೆಚ್ಚಗಿರುವಂತೆ ನೋಡಿಕೊಳ್ಳಿ.

ಬಾಡಿ ಲೋಷನ್ ಬಳಸಿ: ಮಗುವಿನ ತ್ವಚೆ ತೇವದಿಂದ ಕೂಡಿರಲು ಬಾಡಿ ಲೋಷನ್ ಬಳಕೆ ಅತ್ಯಗತ್ಯ. ಮಕ್ಕಳ ತ್ವಚೆ ಬಹಳ ಮೃದುವಾಗಿರುವುದರಿಂದ ರ‍್ಮ ಒಣಗಿ ಉರಿ, ತುರಿಕೆ ಉಂಟಾಗಬಹುದು. ಹೀಗಾಗಿ ಪ್ಯಾರಾಬೆನ್ಸ್ ಮುಕ್ತ ಹಾಗೂ ಹಾಲು, ಬಾದಾಮಿಯನ್ನೊಳಗೊಂಡ ಬಾಡಿಲೋಷನ್ ಮಕ್ಕಳಿಗೆ ಸೂಕ್ತ.

ಮಸಾಜ್: ಸ್ನಾನಕ್ಕೆ ಮುಂಚೆ ಮಗುವಿನ ತ್ವಚೆಯನ್ನ ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡಬೇಕು. ಚಳಿಗಾಲದಲ್ಲಿ ರೈಸ್ ಬ್ರಾನ್​​ ಆಯಿಲ್​ನಿಂದ ಸಮೃದ್ಧವಾದ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಮಗುವಿನ ಅತಿ ಸೂಕ್ಷ್ಮ ರ‍್ಮಕ್ಕೆ ಅಗತ್ಯವಿರುವ ಪೋಷಕಾಂಶಗಳು ದೊರಕುತ್ತವೆ.

ಫ್ರೆಶ್ ನ್ಯೂಸ್

Latest Posts

Featured Videos