ಬುಲೆಟ್ ಬೈಕ್, ಬೊಲೋರೂ ಕಾರಗಳು ಇವರ ಟಾರ್ಗೆಟ್.

ಬುಲೆಟ್ ಬೈಕ್, ಬೊಲೋರೂ ಕಾರಗಳು ಇವರ ಟಾರ್ಗೆಟ್.

ಬೆಂಗಳೂರು, ಜು. 3: ನಗರದ ದೇವನಹಳ್ಳಿಯಲ್ಲಿ ಬುಲೆಟ್ ಬೈಕ್, ಬೊಲೆರೋ ಕಾರು ಮತ್ತು ಆಕರ್ಷಕ ಜೀಪ್ಗಳಂದ್ರೆ ಯಾರಿಗಿಷ್ಟವಿರಲ್ಲ ಹೇಳಿ, ಹೀಗಾಗಿ ಸಾಕಷ್ಟು ಜನ ಈ ವಾಹನಗಳಿಗೆ ದುಪ್ಪಟ್ಟು ಹಣ ನೀಡಿ ಖರೀದಿ ಮಾಡ್ತಾರೆ. ಆದ್ರೆ ಆರೀತಿ ಖರೀದಿ ಮಾಡಿದ ವಾಹನಗಳ ಮೇಲೆಯೆ ಇಲ್ಲೊಂದು ಗ್ಯಾಂಗ್ ಕಣ್ಣಾಕಿ ಇಧೀಗ ಪೊಲೀಸರ ಅತಿಥಿಗಳಾಗಿದ್ದಾರೆ.

ಇವರನ್ನೊಮ್ಮೆ ಸರಿಯಾಗಿ ನೋಡಿ, ಇನ್ನೂ ಇಧೀಗ ಮೀಸೆ ಚಿಗುರುತ್ತಿರೂ ಇವರು ಮೈ ಬಗ್ಗಿಸಿ ಕಷ್ಟಾಪಟ್ಟು ಕೆಲಸ ಮಾಡ್ತಿದ್ರೆ, ಇಂದು ಈ ರೀತಿ ಮುಖ ಮುಚ್ಚಿಕೊಳ್ಳೋ ಪರಿಸ್ಥಿತಿ ನಿರ್ಮಾಣವಾಗ್ತಿರಲಿಲ್ಲ. ಆದ್ರೆ ಅದನ್ನ ಬಿಟ್ಟ ಈ ಖಧೀಮರು ಸುಲಭವಾಗಿ ಹಣಗಳಿಸೋಕ್ಕೆ ಅಂತಲೆ ಸಿಲಿಕಾನ್ ಸಿಟಿಗೆ ಬರ್ತಿದ್ದ ಇವರು ರಾತ್ರಿ ವೇಳೆ ಮನೆ ಮುಂದೆ ನಿಂತಿದ್ದ ವಾಹನಗಳನ್ನ ಎಗರಿಸಿ ಪರಾರಿಯಾಗ್ತಿದ್ದು, ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳೀ ಪೊಲೀಸರ ಅತಿಥಿಗಳಾಗಿದ್ದಾರೆ. ಹೌದು ಅಂದಹಾಗೆ ಈ ರೀತಿ ಕ್ಯಾಮರಾ ಮುಂದೆ ಮುಖ ಮುಚ್ಚಿಕೊಂಡು ಶ್ರೀಕೃಷ್ಣನ ಜನ್ಮಸ್ಥಾನಕ್ಕೆ ಹೋಗ್ತಿರೂ ಈ ಖಧೀಮರ ಹೆಸರು ಅಬ್ದುಲ್ ಮುತಾಲಿಬ್. ಮಹಮದ್ ಸಾಪೀರ್, ಮತ್ತು ಮಹಮದ್ ರಶೀದ್, ಮೂಲತಃಹ ಕೇರಳಾದ ಕಣ್ಣೂರು ಮತ್ತು ವಯನಾಡ್ ಜಿಲ್ಲೆಯವರಾದ ಇವರು ಶಿಖಾರಿ ರೀತಿಯಲ್ಲಿ ವಾರಕ್ಕೋಮ್ಮೆ ಸಿಲಿಕಾನ್ ಸಿಟಿಗೆ ಎಂಟ್ರಿಕೊಡ್ತಿದ್ರು. ಜತೆಗೆ ಸಿಟಿಯ ರಸ್ತೆ ಪಕ್ಕದ ಮನೆಗಳ ಬಳಿ ನಿಲ್ಲಿಸಿದ್ದ ಬುಲೇಟ್ ಬೈಕ್, ಬೊಲೆರೋ ಜೀಪ್ ಮತ್ತು ಉತ್ತಮ ಬೆಲೆ ಬಾಳುವ ವಾಹನಗಳ ಮೇಲೆ ಕಣ್ಣಾಕ್ತಿದ್ದ ಖಧೀಮರು ಮಧ್ಯರಾತ್ರಿ ಯಾರು ಇಲ್ಲದನ್ನ ಕಂಡು ಕ್ಷಣಾರ್ದದಲ್ಲೆ ವಾಹನಗಳನ್ನ ಎಗರಿಸಿ ಪರಾರಿಯಾಗ್ತಿದ್ರು. ಅದೇ ರೀತಿ ಕಳೆದ ತಿಂಗಳು ಸಿಲಿಕಾನ್ ಸಿಟಿಯ ಸಂಜಯ್ ನಗರದಲ್ಲಿ ಬುಲೇಟ್ ಒಂದನ್ನ ಖದ್ದಿದ್ದ ಖದೀಮರು ಕೇರಳಕ್ಕೆ ಹೋಗುವಾಗ ದೇವನಹಳ್ಳಿಯ ಶಾಂತಿನಗರದಲ್ಲಿ ನಿಲ್ಲಿಸಿದ್ದ ಬೊಲೇರೂ ಕಾರು ಎಸ್ಕೇಪ್ ಆಗಿದ್ರು. ಹೀಗಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ದೇವನಹಳ್ಳೀ ಪೊಲೀಸರು ಇಧೀಗ ಪ್ರಕರಣ ಸಂಬಂಧ ಈ ಮೂರು ಜನ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಿಂದ ಒಂದು ಬೊಲೆರೋ ಕಾರು, ಒಂದು ಬುಲೇಟ್ ಬೈಕ್ ಮತ್ತು ಶಿಪ್ಟ್ ಕಾರನ್ನ ವಶಪಡಿಸಿಕೊಂಡಿದ್ದಾರೆ.ಜತೆಗೆ ವಾರಕ್ಕೋಮ್ಮೆ ಸಿಲಿಕಾನ್ ಸಿಟಿಗೆ ವಾಹನ ಕಳ್ಳತನಕ್ಕೆ ಅಂತ ಶಿಖಾರಿ ರೀತಿಯಲ್ಲಿ ಬರ್ತಿದ್ದ ಈ ಖಧೀಮರು ಪ್ರಮುಖವಾಗಿ ಬುಲೆರೋ ಕಾರು, ಜೀಪ್ ಮತ್ತು ಬುಲೆಟ್ ಬೈಕ್ಗಳನ್ನ ಖಧಿಯೋದಕ್ಕೆ ಸ್ಕೇಚ್ ಹಾಕಿ ಖದ್ದ ವಾಹನಗಳನ್ನ ಆ ರಾತ್ರಿಯಲ್ಲೆ ಕೇರಳದ ವಯನಾಡಿಗೆ ಸಾಗಿಸಿ ಅಲ್ಲಿ ಮಾರಾಟ ಮಾಡಿದ್ರಂತೆ. ಅಲ್ಲದೆ ಕಳೆದ ಹಲವು ವರ್ಷಗಳಿಂದ ಇದೇ ಕಳ್ಳತನವನ್ನೆ ಕಾಯಕವನ್ನಾಗಿಸಿಕೊಂಡಿರೂ ಇವರು ತಮಿಳುನಾಡು, ಕರ್ನಾಟಕ ಮತ್ತು ಆಂದ್ರದಲ್ಲಿ ತಮ್ಮ ಕೈಚಳಕ ತೋರಿಸುತ್ತಿರುವುದು  ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ಇನ್ನೂ ಕಳೆದ ತಿಂಗಳು ಮನೆ ಮುಂದೆ ಕಳ್ಳತನವಾಗಿದ್ದ ಬೊಲೆರೋ ವಾಹನ ದೇವನಹಳ್ಳಿ ಪಿಎಸ್ಐ ನಾಗರಾಜ್ ಕಾರ್ಯಾಚರಣೆಯಿಂದ ವಾಪಸ್ ಬಂದಿದ್ದು, ಪೊಲೀಸರ ಕಾರ್ಯವೈಖರಿಗೆ ವಾಹನದ ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಮಧ್ಯರಾತ್ರಿ ಕಳ್ಳಬೆಕ್ಕುಗಳಂತೆ ಬಂದು ಮನೆ ಮುಂದಿನ ವಾಹನಗಳನ್ನ ಖದ್ದು ಎಸ್ಕೇಪ್ ಆಗ್ತಿದ್ದ ಕೆಲ ಖಧೀಮರು ಕೊನೆಗೂ ಪೊಲೀಸರ ಅತಿಥಿಗಳಾಗಿದ್ದಾರೆ. ಇನ್ನೂ ಈ ಗ್ಯಾಂಗ್ ನ ಪ್ರಮುಖ ಆರೋಪಿಗಳ ಬಂಧನಕ್ಕೂ ದೇವನಹಳ್ಳೀ ಪೊಲೀಸರು ಬಲೆ ಬೀಸಿದ್ದು, ಅವರು ಸಿಕ್ಕಿದ ನಂತರ ಮತ್ತಷ್ಟು ಕಳ್ಳತನ ಪ್ರಕರಣಗಳು ಬೆಳಕಿಗೆ ಬರಲಿವೆ.,

ಫ್ರೆಶ್ ನ್ಯೂಸ್

Latest Posts

Featured Videos