ಕಾರು ರಿಪೇರಿಗೆ ಡೀಲರ್ ಕೇಳಿದ್ದು 3 ಲಕ್ಷ-ಗಲ್ಲಿ ಗ್ಯಾರೇಜ್‌ನಲ್ಲಿ 1000 ರೂ.!

ಕಾರು ರಿಪೇರಿಗೆ ಡೀಲರ್ ಕೇಳಿದ್ದು 3 ಲಕ್ಷ-ಗಲ್ಲಿ ಗ್ಯಾರೇಜ್‌ನಲ್ಲಿ 1000 ರೂ.!

ಮುಂಬೈ, ಮೇ.9, ನ್ಯೂಸ್ ಎಕ್ಸ್ ಪ್ರೆಸ್: ಕಾರು ಮಾಲೀಕರು ಹೆಚ್ಚಾಗಿ ತಮ್ಮ ಡೀಲರ್, ಶೋ ರೂಂಗಳಲ್ಲೇ ಕಾರು ಸರ್ವೀಸ್, ರಿಪೇರಿ ಮಾಡಿಸುತ್ತಾರೆ. ಕಾರಣ ಡೀಲರ್‌ಗಳ ಮೇಲೆ ನಂಬಿಕೆ ಹೆಚ್ಚು. ಆದರೆ ಹಲವು ಬಾರಿ ಈ ನಂಬಿಕೆ ಉಳಿಸಿಕೊಳ್ಳುವಲ್ಲಿ ಡೀಲರ್‌ಗಳು ವಿಫಲರಾಗಿದ್ದಾರೆ. ಇಷ್ಟೇ ಅಲ್ಲ ಲೋಕಲ್ ಗ್ಯಾರೇಜ್ ಹುಡುಗರು ಸಮಸ್ಯೆಗೆ ಕಡಿಮೆ ಬೆಲೆಯಲ್ಲಿ ಪರಿಹಾರ ನೀಡಿದ ಸಾಕಷ್ಟು ಉದಾಹರಣೆಗಳಿವೆ. ಇದೀಗ ಇಂತದ್ದೇ ಪ್ರಕರಣ ಮುಂಬೈನಲ್ಲಿ ನಡೆದಿದೆ. ಮುಂಬೈ ಮೂಲದ ಕಾರು ಮಾಲೀಕನ ಸ್ಕೋಡಾ ಡೀಸೆಲ್ ಕಾರು ಸ್ಟಾರ್ಟ್ ಸಮಸ್ಯೆ ಎದುರಿಸುತ್ತಿತ್ತು. ಸರ್ವೀಸ್‌ಗೆ ಇನ್ನೂ ಕೆಲ ತಿಂಗಳು ಬಾಕಿ ಇತ್ತು. ಹೀಗಾಗಿ ಪಕ್ಕದ ಗ್ಯಾರೇಜ್‌ನಲ್ಲಿ ಬ್ಯಾಟರಿ ಪರಿಶೀಲಿಸಿದ್ದಾರೆ. ಬ್ಯಾಟರಿ ಯಾವುದೇ ಸಮಸ್ಯೆ ಇಲ್ಲ ಎಂದು ಖಚಿತಪಡಿಸಿಕೊಂಡ ಮಾಲೀಕ, ಪ್ರಯಾಣ ಬೆಳೆಸಿದ್ದಾರೆ.  ದಾರಿ ನಡುವೆ ಸ್ಕೋಡಾ ಕಾರು ಮತ್ತೆ ಸಮಸ್ಯೆ ಎದರಿಸಿತು. ಎಂಜಿನ್ ಆಫ್ ಆಗುತ್ತಿತ್ತು. ಇಂಧನ ಟ್ಯಾಂಕ್ ಕೂಡ ಖಾಲಿಯಾಗುವ ಹಂತದಲ್ಲಿತ್ತು. ಹೀಗಾಗಿ ಹೆಚ್ಚಿನ ಸಮಸ್ಯೆಗೆ ಗುರಿಯಾಗೋ ಮೊದಲೇ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಿ, ಸಹೋದರನಿಗೆ ಫೋನ್ ಮಾಡಿ ಇಂಧನ ತರುವಂತೆ ಹೇಳಿದ್ದಾರೆ. ಬಳಿಕ 5  ಲೀಟರ್ ಇಂಧನ ತುಂಬಿಸಿದರೂ ಕಾರು ಸ್ಟಾರ್ಟ್ ಆಗಲಿಲ್ಲ. ಹೀಗಾಗಿ ಬೇರೆ ವಾಹನದ  ಸಹಾಯದಿಂದ  ಸ್ಕೋಡಾ ಡೀಲರ್ ಬಳಿಕ ಕೊಂಡೊಯ್ದಿದ್ದಾರೆ. ಮರುದಿನ ಸ್ಕೋಡಾ ಡೀಲರ್ ಕಾರು ಮಾಲೀಕನಿಗೆ ಫೋನ್ ಮಾಡಿದ್ದಾರೆ. ಕಾರನ್ನು ಸಂಪೂರ್ಣ ಪರಿಶೀಲಿಸಿದ್ದೇವೆ. 4 ಫ್ಯೂಯೆಲ್ ಇಂಜೆಕ್ಟರ್, ಫ್ಯೂಯೆಲ್ ಪಂಪ್, ಫ್ಯೂಯೆಲ್ ಲೈನ್ ಹಾಗೂ ಇತರ ಕೆಲ ಬಿಡಿ ಭಾಗಗಳನ್ನ ಬದಲಾಯಿಸಬೇಕು. ಜೊತೆಗೆ ಸರ್ವೀಸ್ ಕೂಡ ಮಾಡಬೇಕು. ಹೀಗಾಗಿ ಅಂದಾಜು ಮೊತ್ತ 3 ಲಕ್ಷ ರೂಪಾಯಿ ಎಂದಿದ್ದಾರೆ. ಕಾರು ರಿಪೇರಿಗೆ 3 ಲಕ್ಷ ರೂಪಾಯಿ ಎಂದು ತಕ್ಷಣ ಬೆಚ್ಚಿ ಬಿದ್ದ ಮಾಲೀಕ, ಕಾರನ್ನು ಲಾರಿ ಮೂಲಕ ಮನೆ ಹತ್ತಿರದ ಲೋಕಲ್ ಗ್ಯಾರೇಜ್‌ಗೆ ತಂದಿದ್ದಾರೆ. ಲೋಕಲ್ ಗ್ಯಾರೇಜ್ ಹುಡುಗ ಕಾರು ಪರಿಶೀಲಿಸಿ ಕೇವಲ ಹತ್ತೇ ನಿಮಿಷದಲ್ಲಿ ಕಾರು ಸರಿಪಡಿಸಿದ್ದಾರೆ.  ಕೇವಲ 1,000 ರೂಪಾಯಿ ಕಾರು ಸಂಪೂರ್ಣ ರಿಪೇರಿ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos