ಕ್ಯಾನ್ಸರ್ ತಡೆಗೆ: ದಾಳಿಂಬೆ ಹಣ್ಣು ಸೂಕ್ತ ಮದ್ದು

ಕ್ಯಾನ್ಸರ್ ತಡೆಗೆ: ದಾಳಿಂಬೆ ಹಣ್ಣು ಸೂಕ್ತ ಮದ್ದು

ಹಣ್ಣು-ಹಂಪಲ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ದೇಹಕ್ಕೆ ಬೇಕಾಗುವ ಆರೋಗ್ಯವನ್ನು ನೀಡುತ್ತವೆ. ಪ್ರತಿಯೊಂದು ಹಣ್ಣಿನಲ್ಲೂ ಒಂದೊಂದು ವಿಶಿಷ್ಟ ಗುಣವಿದೆ.

ದಾಳಿಂಬೆ ಹಣ್ಣನ್ನು ಇಷ್ಟ ಪಡದವರು ಯಾರೂ ಇಲ್ಲ. ಎಲ್ಲಾರು ಇಷ್ಟ ಪಟ್ಟು ತಿನ್ನುತ್ತಾರೆ. ದೈವಿಕ ಹಣ್ಣು ಎಂದು ಕರೆಯಲ್ಪಡುವ ದಾಳಿಂಬೆ ಹಣ್ಣು ಹಲವಾರು ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಕೆ ಹೆಚ್ಚಿನ ಪ್ರಮಾಣದಲ್ಲಿದ್ದು, ಆರೋಗ್ಯವನ್ನು ವೃದ್ಧಿಸುವಲ್ಲಿ ನೆರವಾಗುತ್ತವೆ.

ಅಲ್ಲದೇ  ಆ್ಯಂಟಿಆಕ್ಸಿಡೆಂಟ್​ಗಳೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ರಕ್ತನಾಳದಲ್ಲಿ ಶೇಖರಣೆಯಾದ ಕೊಬ್ಬಿನಾಂಶ ಕರಗಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ರಕ್ತಸಂಚಾರ ಸರಾಗವಾಗುವಂತೆ ಮಾಡುತ್ತದೆ. ಇದರಲ್ಲಿನ ಎಪಿಗೆಲ್ಲೋಕೆಟಕಿನ್ ಎನ್ನುವ ಆ್ಯಂಟಿ-ಆಕ್ಸಿಡೆಂಟ್ ರಕ್ತನಾಳದಲ್ಲಿನ ಬ್ಲಾಕೇಜ್​ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಇಂದಿನ ಯಾಂತ್ರಿಕ ಲೋಕದಲ್ಲಿ ಬಲು ಸಹಜವಾಗಿ ಬರುವ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುವ ಜೀವಶಕ್ತಿಯನ್ನು ಈ ದಾಳಿಂಬೆ ಹಣ್ಣು ಹೊಂದಿದೆ. ದಾಳಿಂಬೆಯು ನಿಮ್ಮ ಚರ್ಮ, ದೇಹ ಹಾಗೂ ಕೂದಲಿನ ರಕ್ಷಣೆಯಲ್ಲೂ ಮಹತ್ತರ ಪಾತ್ರ ವಹಿಸುತ್ತದೆ.

ಕ್ಯಾನ್ಸರ್ ತಡೆಯುತ್ತದೆ:
ದಾಳಿಂಬೆ ಹಣ್ಣಿನಲ್ಲಿರುವ ಆ್ಯಂಟಿ ಆ್ಯಕ್ಸಿಡೆಂಟ್​ ಅಂಶವು ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ. ದಾಳಿಂಬೆಗಳಲ್ಲಿ ಪ್ಯುನಿಕ್ ಆಸಿಡ್ (ಒಮೆಗಾ -5 ಪಾಲಿ-ಸ್ಯಾಚುರೇಟೆಡ್ ಕೊಬ್ಬಿನಾಮ್ಲ) ಅಂಶವು ಸ್ತನ ಕ್ಯಾನ್ಸರ್​ಗೆ ಕಾರಣವಾಗುವಂತದ ಕೋಶಗಳನ್ನು ಪರಿಣಾಮಕಾರಿಯಾಗಿ ಕೊಲ್ಲುತ್ತದೆ. ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್​ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ಬೀಜಗಳಲ್ಲಿ ಕಂಡುಬರುವ ಸಸ್ಯ ಆಧಾರಿತ ರಾಸಾಯನಿಕಗಳು ಯಾವುದೇ ಕ್ಯಾನ್ಸರ್ ಕೋಶಗಳಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಕ್ಯಾನ್ಸರ್
ಗೆ ತುತ್ತಾದರೆ ಇಂದಿನ ಆಧುನಿಕ ಜಗದಲ್ಲಿ ಸಾವಿರಾರು ದುಡ್ಡು ಖರ್ಚು ಮಾಡಬೇಕು. ಮಾಡಿದರೂ
ಗುಣಮುಖರಾಗುವು ಕಷ್ಟ. ಆದ್ದರಿಂದ ರೋಗಕ್ಕೆ ತುತ್ತಾಗುವ ಮುಂಚೆಯೇ ಆರೋಗ್ಯವನ್ನು
ಕಾಪಾಡಿಕೊಳ್ಳುವುದು ಉತ್ತಮ.

ಫ್ರೆಶ್ ನ್ಯೂಸ್

Latest Posts

Featured Videos