ಸೋಮವಾರ ಬಂದ್‌ಗೆ ಕರೆ

ಸೋಮವಾರ ಬಂದ್‌ಗೆ ಕರೆ

ತುರುವೇಕೆರೆ: ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕರ ಕಾಯ್ದೆ ವಿರೋಧಸಿ ಸೆ.೨೮ ರ ಸೋಮವಾರ ತುರುವೇಕೆರೆ ತಾಲೂಕು ಬಂದ್ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್‌ಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನೆಡೆದ ರೈತ ಸಂಘ, ಕನ್ನಡ, ದಲಿತ, ಕಾರ್ಮಿಕರ, ಸಿಐಟಿಯು ಸೇರಿದಂತ ಹಲವು ಸಂಘಟನೆಗಳ ಮುಖಂಡರ ಸೆಭೆಯ ನಂತರ ಸುದ್ದಿಗಾರೊಂದಿಗೆ ಮಾತನಾಡಿ ಸೋಮವಾರ ಬೆಳಿಗ್ಗೆ ೬ ರಿಂದ ಸಂಜೆ ೬ರವರೆಗೂ ಬಂದ್ ಮಾಡಲಾಗುವುದು ಸಂಜೆ ೪ ಗಂಟೆಗೆ ಬಾಣಸಂದ್ರ ವೃತ್ತದಲ್ಲಿ ಪ್ರತಿಭಟನೆ ನೆಡಸಲಾಗುವುದು. ಹಾಲು, ಆಸ್ಪತ್ರೆ, ಮೆಡಿಕಲ್ ಮಾತ್ರ ತೆರಯಲಿದ್ದು ಪೆಟ್ರೋಲ್ ಬಂಕ್, ಹೋಟಲ್, ಶಾಲಾ ಕಾಲೇಜು, ಎಲ್ಲ ದಿನಸಿ ಅಂಗಡಿ, ತರಕಾರಿ ಅಂಗಡಿಗಳ ಮಾಲೀಕರು ಹಾಗೂ ದಿನ ನಿತ್ಯದ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿ ಸ್ವಯಂ ಪ್ರೇರಿತರಾಗಿ ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಬೇಕಾಗಿದೆ. ಸಾರ್ವಜನಿಕರು ಸಹಕಾರ ನೀಡಬೇಕಾಗಿ ಕೋರಿದ್ದಾರೆ.
ಸಿಐಟಿಯು ಕಾರ್ಯದರ್ಶಿ ಸತೀಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಣ್ಣ, ಕರವೇ ಅದ್ಯಕ್ಷ ಉಪೇಂದ್ರಕುಮಾರ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ, ಪಂಚಾಯ್ತಿ ಕಾವಲು ಸಮಿತಿ ಅಧ್ಯಕ್ಷ ಎಚ್.ಎನ್.ವೆಂಕಟೇಶ್, ದಲಿತ ಸಂಘಟನೆ ಅಧ್ಯಕ್ಷ ಗೋವಿಂದರಾಜು, ಗ್ರಾಮ ಪಂಚಾಯ್ತಿ ನೌಕರರ ಸಂಘದ ಅಧ್ಯಕ್ಷ ರಮೇಶ್, ಕಾಂಗ್ರೆಸ್ ಕಿಸಾನ್ ಸಂಘದ ಅಧ್ಯಕ್ಷ ಸ್ವರ್ಣಕುಮಾರ್, ರೈತ ಮುಖಂಡರಾದ ರಹಮತ್, ಬೈರಪ್ಪ, ಜಾಫರ್, ಶ್ರೀನಿವಾಸ್ ಸೇರಿದಂತೆ ಅನೇಕ ಮುಖಂಡರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos