ಸಿಲಿಕಾನ್ ಸಿಟಿಯಲ್ಲಿ ಅದ್ದೂರಿ ಕೇಕ್ ಶೋ!

ಸಿಲಿಕಾನ್ ಸಿಟಿಯಲ್ಲಿ ಅದ್ದೂರಿ ಕೇಕ್ ಶೋ!

ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಕ್ರಿಸ್ಮಸ್ ಅಂಗವಾಗಿ ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಆ್ಯಂಡ್ ಕೇಕ್ ಆರ್ಟ್ (ಬಿಸಿಎ) ವತಿಯಿಂದ 49ನೇ ವಾರ್ಷಿಕ ಕೇಕ್ ಪ್ರದರ್ಶನ ಆಯೋಜಿಸಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಬೇಕಾದ ತಯಾರಿಗಳು ವಿಜೃಂಭಣೆಯಿಂದ ಸಾಗಿತ್ತು. ಹಬ್ಬದ ಸೊಬಗು ನಗರದಲ್ಲಿ ಜೋರಾಗಿದೆ. ಈ ಮಧ್ಯೆ ಕ್ರಿಸ್ಮಸ್ ಸಲುವಾಗಿ ಕೇಕ್ ಶೋ ಆಯೋಜನೆ ಮಾಡಲಾಗಿದೆ. ಯುಬಿ ಸಿಟಿ ಸಮೀಪದ ಸೇಂಟ್ ಜೋಸೆಫ್ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿದೆ.

ಈ ಕೇಕ್ ಶೋಗೆ ಭೇಟಿ ನೀಡಿ ವಿಶೇಷ ರೀತಿಯ, ವಿಶೇಷ ವಿನ್ಯಾಸದ ಕೇಕ್ಗಳನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಕೇಕ್ ಸವಿದು ಎಂಜಾಯ್ ಮಾಡಿ. ಈ ಕೇಕ್ ಶೋ ಥಿಂಕ್ ಲೋಕಲ್- ಆಕ್ಟ್ ಗ್ಲೋಬಲ್ ಪರಿಕಲ್ಪನೆಯಲ್ಲಿ ಕೇಕ್ ಪ್ರದರ್ಶನಕ್ಕೆ ಜಾಗತಿಕ ವಿನ್ಯಾಸದ ಟಚ್ ನೀಡಲಾಗಿದ್ದು, ಚಿಕ್ಕಮಕ್ಕಳಿಂದ ಹಿಡಿದು ಹಿರಿಯರ ಅಭಿರುಚಿಗೆ ತಕ್ಕಂತೆ ಕೇಕ್ ಗಳ ವಿನ್ಯಾಸ ಮಾಡಲಾಗಿದೆ. ಇನ್ನು ಈ ಕ್ರಿಸ್ಮಸ್ ಸಲುವಾಗಿಯೇ ಕಳೆದ ಆರು ತಿಂಗಳಿನಿಂದ ಕೇಕ್ ತಯಾರಿಸಿ ಪ್ರದರ್ಶನಕ್ಕೆ ಇರಿಸಲಾಗಿದ್ದು, 3ಡಿ ಸಕ್ಕರೆ-ಕೇಕ್ ರಚನೆಗೆ ಹೆಚ್ಚು ಒತ್ತು ನೀಡಲಾಗಿದೆ. ಸುಮಾರು 16 ಮಂದಿಯ ತಂಡದಿಂದ 23 ಪ್ರಕಾರದ ಕೇಕ್ ತಯಾರಿಸಲಾಗಿದೆ. ಈ ಕೇಕ್ ಶೋ ಸಲುವಾಗಿಯೇ ಸುಮಾರು 6,062 ಕೆ.ಜಿ.ಗೂ ಹೆಚ್ಚಿನ ಕೇಕ್-ಸಕ್ಕರೆ ಬಳಕೆ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos