ವಾಹನಗಳ ಸಚಾರದಲ್ಲಿ ಕೊಂಚ ವಿರಳ

ವಾಹನಗಳ ಸಚಾರದಲ್ಲಿ ಕೊಂಚ ವಿರಳ

ಬೆಂಗಳೂರು, ಆ. 11 : ನಗರದ ಸಾರ್ವಜನಿಕರು, ವಾಹನಗಳ ಶಬ್ದ, ಸಚಾರ ದಟ್ಟಣೆ ಟ್ರಾಫಿಕ್ ಜಾಮ್ ನಿಂದ ಬೇಸತ್ತು ಹೋಗಿದ್ದಾರೆ. ವರಮಹಾ ಲಕ್ಷ್ಮೀ ವ್ರತದ ಅಂಗವಾಗಿ ಸಾಲು ಸಾಲು ರಜೆ ಕಾರು ಆಟೋ ದ್ವಿ ಚಕ್ರ ವಾಹನಗಳ ಸಚಾರದಲ್ಲಿ ಕೊಂಚ ಮಟ್ಟಿಗೆ ವಿರಳವಾಗಿತ್ತು. ಜನನಿಬಿಡ ಹಾಗೂ ವಾಹನ ಸಂಚಾರ ದಟ್ಟಣೆ ಮೆಜೆಸ್ಟಿಕ್ ,ಕೆ.ಆರ್ ಮಾರುಕಟ್ಟೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬರುವ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನ ಸಚಾರ ಕಂಡು ಬಂದಿಲ್ಲ.
ಪ್ರತಿನಿತ್ಯ ಗಿಜಿಗುಡುವ ಜನಸಂದಣಿ ನಡುವೆ ತೂರಿ ಬರುವ ವಾಹನ ಸವಾರರು,ಸಾಲುಗಟ್ಟಿ ನಿಲ್ಲುವ ಬಿಎಂಟಿಸಿ ಬಸ್ಸುಗಳು,ಆಟೋ ಖಾಸಗಿ ಬಸ್ಸು ಮತ್ತು ಇನ್ನಿತರ ವಾಹನಗಳ ಸಂಚಾರ ವಿರಳ ಹಾಗೂ ಸುಗಮವಾಗಿ ಓಡಾಡತ್ತಿದ್ದುದು ಕಂಡು ಬಂತು.ಕೆಲ ರಸ್ತೆಗಳಂತೂ ಬಿಎಂಟಿಸಿ ಆಟೋ ದ್ವಿಚಕ್ರ ವಾಹನ ಸಂಚಾರ ಬಿಟ್ಟರೆ ಪಾದಾಚಾರಿಗಳ ಓಡಾಟ ಸಂಪೂರ್ಣ ಕಂಡು ಬರಲಿಲ್ಲ. ನಗರದ ನಿವಾಸಿಗಳು ಜೀವನ ನಿರ್ವಹಣೆ ದಿನನಿತ್ಯ ಫ್ಯಾಕ್ಟರಿ ,ಹೋಟೆಲ್ ಕಾರ್ಮಿಕರು, ಜವಳಿ ಅಂಗಡಿ ಮಾರುಕಟ್ಟೆ ಹೀಗೆ ನಾನಾ ವೃತ್ತಿಗಳಿಗೆ ಹೋಗಲೇ ಬೇಕಾದ ತುರ್ತು ಅಗತ್ಯ ಅನಿವಾರ್ಯ ಕೂಡಾ.ಕೆಲಸದ ಒತ್ತಡ ವಾಹನಗಳ ಸಂಚಾರ ದಟ್ಟಣೆ , ಟ್ರಾಫಿಕ್ ಜಾಮ್ , ಪಾದಾಚಾರಿಗಳ ನೂಕು ನುಗ್ಗಲಿಗೆ ಕೊಂಚ ಮಟ್ಟಿಗೆ ವಿರಾಮ ದೊರೆತಿತ್ತು. ಬಹುತೇಕ ರಸ್ತೆಗಳಿಗೂ ಕೊಂಚ ಮಟ್ಟಿಗೆ ಬಿಡುವು ಪಡೆದಿದ್ದವು.
ಶ್ರಾವಣ ಮಾಸ ಆರಂಭದ ಹಿನ್ನೆಲೆಯಲ್ಲಿ ಎರಡನೆ ಶನಿವಾರ ,ವರ ಮಹಾಲಕ್ಷ್ಮಿ ಹಬ್ಬ,ಭಾನುವಾರ ಮತ್ತು ಸೋಮವಾರ ಬಕ್ರೀದ್ ಹಬ್ಬದ ರಜೆಗಳಿಂದಾಗಿ ನಗರದ ರಸ್ತೆಗಳು ಪ್ರತಿ ದಿನ ಭಾರ ಹೊರುವುದರಿಂದ ಸ್ವಲ್ಪ ಮಟ್ಟಿಗೆ ರಿಲೀಫ್ ಪಡೆದು ಕೊಂಡಿದ್ದವು.

ಫ್ರೆಶ್ ನ್ಯೂಸ್

Latest Posts

Featured Videos