ಉಪಸಮರ: ನಾಳೆಯಿಂದ ಬಿಎಸ್ ವೈ ಪ್ರಚಾರ

ಉಪಸಮರ: ನಾಳೆಯಿಂದ ಬಿಎಸ್ ವೈ ಪ್ರಚಾರ

ಕುಂದಗೋಳ, ಮೇ. 9, ನ್ಯೂಸ್ ಎಕ್ಸ್ ಪ್ರೆಸ್: ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಾಳೆಯಿಂದ  ಚಿಂಚೋಳಿ ಹಾಗೂ ಕುಂದಗೋಳ ಕ್ಷೇತ್ರಗಳಲ್ಲಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಪಣ ತೊಟ್ಟಿರುವ ಅವರು ಭರ್ಜರಿ ಪ್ರಚಾರ ನಡೆಸಲಿದ್ದಾರೆ.

ಇಂದು ಬಿ.ಎಸ್.ಯಡಿಯೂರಪ್ಪ ಕುಂದಗೋಳ ಕ್ಷೇತ್ರಕ್ಕೆ ತೆರಳಲಿದ್ದು, ಮೇ. 17 ರ ವರೆಗೆ 2 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಮೇ. 10 ರಿಂದ 12 ರ ವರೆಗೆ ಕುಂದಗೋಳ ಹಾಗೂ ಮೇ. 13 ರಿಂದ 14 ರ ವರೆಗೆ ಚಿಂಚೋಳಿಯಲ್ಲಿ, 16-17 ಕ್ಕೆ ಮತ್ತೆ ಕುಂದಗೋಳದಲ್ಲಿ ಪ್ರಚಾರ ನಡೆಸಲಿದ್ದಾರೆ.

ಇನ್ನು ರಾಜ್ಯದಲ್ಲಿ ತೀವ್ರ ಬರ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರಗಳಲ್ಲಿನ ವಾಸ್ತವಿಕ ಚಿತ್ರಣದ ವರದಿ ನೀಡುವಂತೆ ಬಿಜೆಪಿ ಶಾಸಕರಿಗೆ ಯಡಿಯೂರಪ್ಪ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos