ಮೀನು ತಿನ್ನೋದ್ರಿಂದ ಆರೋಗ್ಯದ ಹಲವು ಪ್ರಯೋಜನೆಗಳು

ಮೀನು ತಿನ್ನೋದ್ರಿಂದ ಆರೋಗ್ಯದ ಹಲವು ಪ್ರಯೋಜನೆಗಳು

ಇಂದಿನ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ನಮ್ಮದೇಹವನ್ನು ಆರೋಗ್ಯವಾಗಿಟ್ಟುಕೊಳ್ಲಲು ಮೀನು ತುಂಬಾ ತುಂಬಾ ಸಹಕಾರಿಯಾಗಿದೆ, ಮೀನು ಆರೋಗ್ಯಕರ ಆಹಾರ ಮತ್ತು ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು. ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಫೋಸ್ಫರಸ್ ಲಭ್ಯವಿದೆ. ಮೀನಿನಲ್ಲಿ ಕಬ್ಬಿನ, ಸತು, ಮೆಗ್ನಿಶಿಯಂ, ಐಯೋಡಿನ್ ಮತ್ತು ಪೊಟಾಶಿಯಂನಂತಹ ಖನಿಜಾಂಶಗಳಿವೆ. ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ.

ಮೀನು ಪ್ತಿನಿತ್ಯ ಸೇವಿಸುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು. ಯಕೃತ್, ಮೆದುಳು ಇತ್ಯಾದಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಇದು ನೆರವಾಗುವುದು. ಸರಿಯಾದ ನಿದ್ರೆಗೆ ಇದು ಸಹಕಾರಿ. ದಿನಾಲೂ ಮೀನು ತಿನ್ನುವುದರಿಂದ ಹಲವಾರು ರೀತಿಯ ರೋಗಗಳನ್ನು ತಡೆಯಬಹುದು. ಅದರಲ್ಲೂ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು. ಮೀನಿನಿಂದ ನಿಮಗೆ ಸಿಗುವ ಹತ್ತು ಲಾಭಗಳ ಬಗ್ಗೆ ತಿಳಿದುಕೊಳ್ಳಿ…

ಹೃದಯ ಕಾಯಿಲೆ ಸಮಸ್ಯೆ ಕಡಿಮೆ ಮಾಡುವುದು : ಹೃದಯದ ಆರೋಗ್ಯಕ್ಕೆ ನೆರವಾಗುವಂತಹ ಒಮೆಗಾ-3 ಕೊಬ್ಬಿನಾಮ್ಲವು ಮೀನಿನಲ್ಲಿದೆ ಇದು ಹೃದಯ ರಕ್ಷಿಸುವಲ್ಲಿಪ್ರಮುಖ ಪಾತ್ರವಹಿಸುತ್ತದೆ.

ಅಲ್ಝೈಮರ್ ಕಾಯಿಲೆ ಕುಗ್ಗಿಸುವುದು : ನಿಯಮಿತವಾಗಿ ಸೇವಿಸುವುದರಿಂದ ಮೆದುಳಿನ ಕುಗ್ಗುವಿಕೆ ಮತ್ತು ಕ್ಷೀಣಿಸುವಿಕೆ ಕಡಿಮೆ ಮಾಡಬಹುದು. ಇದರಿಂದ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುವುದು.

ಖಿನ್ನತೆ ಕಡಿಮೆ ಮಾಡುವುದು : ಮೀನು ಮತ್ತು ಮೀನಿನ ಎಣ್ಣೆಯು ಖಿನ್ನತೆ ದೂರ ಮಾಡುವುದು. ಇದು ಖಿನ್ನತೆಯ ಲಕ್ಷಣವನ್ನು ಕಡಿಮೆ ಮಾಡಿ ನಿಮ್ಮ ಮಾನಸಿಕ ಆರೋಗ್ಯ ಸುಧಾರಿಸುವುದು.

ವಿಟಮಿನ್ ಡಿ ಮೂಲ : ಮೂಳೆಗಳ ಆರೋಗ್ಯ ಮತ್ತು ಬೆಳವಣಿಗೆಗೆ ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಡಿ ಅತೀ ಅಗತ್ಯ. ವಿಟಮಿನ್ ಡಿ ಕೊರತೆ ಕಡಿಮೆ ಮಾಡಬೇಕೆಂದರೆ ನಿಯಮಿತವಾಗಿ ಮೀನು ತಿನ್ನಿ.

ದೃಷ್ಟಿ ಸುಧಾರಣೆ : ಮೀನಿನಲ್ಲಿ ಇರುವ ಒಮೆಗಾ-3 ಕೊಬ್ಬಿನಾಮ್ಲವು ಕಣ್ಣಿನ ದೃಷ್ಟಿ ಮತ್ತು ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಸರಿಯಾದ ನಿದ್ರೆಗೆ : ನಿಮಗೆ ಮಲಗಿದರೂ ನಿದ್ರೆ ಬರದೆ ಇದ್ದರೆ.ಮೀನು ಪ್ರತಿದಿನ ಸೇವಿಸಿ, ಹೆಚ್ಚು ಮೀನು ಸೇವನೆ ಮಾಡಿದ ಜನರು ಸರಿಯಾಗಿ ನಿದ್ರೆ ಮಾಡಿರುವುದು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ.

ಸಂಧಿವಾತ ಕಡಿಮೆ ಮಾಡುವುದು : ನೀವು ಸಂಧಿವಾತ, ಗಂಟುಗಳ ತೀವ್ರವಾದ ಉರಿಯೂತವಾಗಿ ಬಳಲುತ್ತಿದ್ದರೆ ದಿನನಿತ್ಯ ಮೀನಿನ ಸೇವನೆ ಮಾಡಿ.ಕೊಲೆಸ್ಟ್ರಾಲ್ ತಗ್ಗಿಸುವುದು : ಮೀನಿನಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ದೇಹದಲ್ಲಿ ರುವ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವುದು.

ಮಧುಮೇಹ ತಗ್ಗಿಸುವುದು : ಅಧ್ಯಯನವೊಂದರ ಪ್ರಕಾರ ಕೆಲವೊಂದು ಅಟೋಇಮ್ಯೂನ್ ಕಾಯಿಲೆಗಳಾದ ಟೈಪ್ 1 ಮಧುಮೇಹವನ್ನು ಮೀನು ತಗ್ಗಿಸುವುದು.

ಋತುಚಕ್ರದ ಮೊದಲಿನ ಸಮಸ್ಯೆ ನಿವಾರಣೆ : ಮಹಿಳೆಯರಲ್ಲಿ ಋತುಚಕ್ರದ ಮೊದಲು ಕಾಣಿಸಿಕೊಳ್ಳುವಂತಹ ಕೆಲವೊಂದು ಸಮಸ್ಯೆಗಳನ್ನು ಮೀನಿನಲ್ಲಿರುವ ಅಂಶಗಳು ಪರಿಹರಿಸುವುದು.

 

ವರದಿಗಾರರು

ಮಂಜುನಾಥ.ಲಕ್ಕಿಮರ(ವಿಜಯನಗರ)

 

 

ಫ್ರೆಶ್ ನ್ಯೂಸ್

Latest Posts

Featured Videos