ಉದ್ದಿಮೆ ಪರವಾನಗಿ ಶುಲ್ಕ

ಉದ್ದಿಮೆ ಪರವಾನಗಿ ಶುಲ್ಕ

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ದಿಮೆದಾರರ ಉದ್ದಿಮೆ ಪರವಾನಗಿ ದರವನ್ನು ಶೇ.೫ರಷ್ಟು ಹೆಚ್ಚಳ ಮಾಡಲು ಪಾಲಿಕೆ ಸದಸ್ಯರೆಲ್ಲರೂ ಸಹಮತ ನೀಡಿದರು.

ಪಾಲಿಕೆ ಸಭಾಂಗಣದಲ್ಲಿಂದು ನಡೆದ ಕೌನ್ಸಿಲ್ ವಿಶೇಷ ಸಾಮಾನ್ಯ ಸಭೆಯಲ್ಲಿ ಕೋವಿಡ್-೧೯ನಿಂದಾಗಿ ಪಾಲಿಕೆ ವತಿಯಿಂದ ಉದ್ದಿಮೆ ದರಗಳನ್ನು ಶೇ.೫ರಷ್ಟು ಹೆಚ್ಚಳ ಮಾಡುವಂತೆ ಆಗ್ರಹಿಸಿದರಲ್ಲದೇ ದಂಡ ಶುಲ್ಕ ಶೇ.೩೦ರಷ್ಟು ಸಿಮೀತಗೊಳಿಸುವಂತೆ ಸದಸ್ಯರೆಲ್ಲರೂ ಒಮ್ಮತ ಸೂಚಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿರುವ ಹಿಂದುಳಿದ ವರ್ಗಕ್ಕೆ ಸೇರಿದ ಮಡಿವಾಳ ಸಮಾಜ ಹಾಗೂ ಸವಿತಾ ಸಮಾಜ ಕಸುಬುಗಳಾದ ಕಟಿಂಗ್ ಶಾಪ್(ಹೇರ್ ಡ್ರೆಸೆಸ್) ಹಾಗೂ ಐರನ್ ಅಂಗಡಿಗಳಿಗೆ(ಲಾಂಡ್ರಿ ಡ್ರೈಕ್ಲಿಂಗ್ ಶಾಫ್) ಪಾಲಿಕೆ ನೀಡುವ ಪರವಾನಗಿ ದರವನ್ನು ಶೇ.೫೦ ರಿಯಾಯಿತಿ ದರದಲ್ಲಿ ಅನ್ವಯವಾಗುವಂತೆ ಉದ್ದಿಮೆ ರಹದಾರಿಯನ್ನು ನೀಡಲು ಸಭೆ ತೀರ್ಮಾನಿಸಿತು. ಅಲ್ಲದೇ ಕಡಿಮೆ ಆದಾಯ ಹೊಂದಿರುವ ಇತರೆ ಸಮುದಾಯದವರಿಗೂ ಕೂಡ ಈ ದರ ಅನ್ವಯವಾಗುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಆಯುಕ್ತರಿಗೆ ಸದಸ್ಯರೆಲ್ಲರೂ ಆಗ್ರಹಿಸಿದರು.
ಪಾಲಿಕೆ ವ್ಯಾಪ್ತಿಯ ಶಿಥಿಲಾವಸ್ಥೆಯಲ್ಲಿರುವ ಕಂಬಗಳನ್ನು ಕೂಡಲೇ ತೆರವುಗೊಳಿಸಿ ಹೊಸ ಕಂಬಗಳನ್ನು ನೆಡಬೇಕು. ಎಷ್ಟೋ ಕಡೆ ಕಂಬಗಳು ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದರೂ ಬೆಸ್ಕಾಂ ಗಮನಹರಿಸುತ್ತಿಲ್ಲ. ವಿದ್ಯುತ್ ಅವಘಡಗಳಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಿ ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸದಸ್ಯರೊಬ್ಬರು ತಿಳಿಸಿದರು.
ಪಾಲಿಕೆ ಸದಸ್ಯ ಕುಮಾರ್ ಮಾತನಾಡಿ, ಸ್ಮಾರ್ಟ್ಸಿಟಿ, ಬೆಸ್ಕಾಂ ವಿವಿಧ ಇಲಾಖೆಗಳ ಯೋಜನೆಯಡಿಯಲ್ಲಿ ನಗರದಲ್ಲಿ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳಾದ ಗ್ಯಾಸ್‌ಲೈನ್, ಪೈಪ್‌ಲೈನ್, ವಿದ್ಯುತ್ ಪರಿವರ್ತಕಗಳ ಅಳವಡಿಕೆಗಾಗಿ ರಸ್ತೆಗಳನ್ನು ಅಗೆದು ದುರಸ್ಥಿಗೊಳಿಸಿದ್ದಾರೆ. ಇವರಿಂದ ಪಾಲಿಕೆ ತೆರಿಗೆ ಸಂಗ್ರಹಿಸಬೇಕು ಎಂದು ಆಯುಕ್ತರ ಗಮನಕ್ಕೆ ತಂದರು.

ಫ್ರೆಶ್ ನ್ಯೂಸ್

Latest Posts

Featured Videos