ಬಸ್ ಗಳ ಮೇಲೆ ಭಾಷಾ ವಿವಾದ

ಬಸ್ ಗಳ ಮೇಲೆ ಭಾಷಾ ವಿವಾದ

ಚೆನ್ನೈ, ಜು. 8 : ತಮಿಳುನಾಡಿನಲ್ಲಿ ಈಗ ಸರ್ಕಾರಿ ಬಸ್ಸುಗಳು ಕೂಡ ‘ಭಾಷಾ ವಿವಾದ’ಕ್ಕೆ ತುತ್ತಾಗಿವೆ. ಇತ್ತೀಚೆಗಷ್ಟೇ ತಮಿಳುನಾಡು ಸರ್ಕಾರವು 500 ಹೊಸ ಬಸ್ಸುಗಳನ್ನು ಖರೀದಿಸಿತ್ತು. ಈ ಬಸ್ಸುಗಳಲ್ಲಿ ‘ತುರ್ತು ನಿರ್ಗಮನ’ ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಾದ ಹಲವು ಸೂಚನೆಗಳನ್ನು ಹಿಂದಿ ಭಾಷೆಯಲ್ಲಿ ಪ್ರಕಟಿಸಲಾಗಿತ್ತು. ಹಿಂದಿ ಭಾಷೆಯ ಸ್ಟಿಕರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಶುರುವಾದಂತೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಡಿಎಂಕೆ ಹಾಗೂ ತಮಿಳು ಹೋರಾಟಗಾರರು, ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದಿದ್ದಾರೆ. ಬಿಸಿ ತಟ್ಟುತ್ತಲೇ ಎಚ್ಚೆತ್ತ ಸರ್ಕಾರ ಹಿಂದಿ ಸ್ಟಿಕರ್ಗಳನ್ನು ತೆಗೆದುಹಾಕಿದೆ.

ಫ್ರೆಶ್ ನ್ಯೂಸ್

Latest Posts

Featured Videos