ಜು.25 ವಿದ್ಯಾರ್ಥಿ ಬಸ್ ಪಾಸ್ ವಿಸ್ತರಣೆ

ಜು.25 ವಿದ್ಯಾರ್ಥಿ ಬಸ್ ಪಾಸ್ ವಿಸ್ತರಣೆ

ಬೆಂಗಳೂರು, ಜು,10 : ಹೊಸದಾಗಿ ವಿದ್ಯಾರ್ಥಿ ಬಸ್ಪಾಸ್ ಸ್ಮಾರ್ಟ್ ಕಾರ್ಡ್ಗಳ ವಿತರಣೆಯಲ್ಲಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಹಿಂದಿನ ಸಾಲಿನ ಬಸ್ಪಾಸ್ಗಳನ್ನು ಜು.25ರವರೆಗೆ ಮಾನ್ಯ ಮಾಡುವ ನಿರ್ಧಾರವನ್ನು ಬಿಎಂಟಿಸಿ ಕೈಗೊಂಡಿದೆ.

ಸ್ಮಾರ್ಟ್ಕಾರ್ಡ್ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಕಳೆದ ಜು.7ಕ್ಕೆ ಮುಕ್ತಾಯಗೊಂಡಿದ್ದ ವಿಸ್ತರಣೆ ಅವಧಿಯನ್ನು ಮತ್ತೆ ಮುಂದುವರಿಸಿರುವುದಾಗಿ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು(ಸಿಟಿಎಂ) ದೃಢಪಡಿಸಿದ್ದಾರೆ. ಈ ಆದೇಶವನ್ನು ಸಂಸ್ಥೆಯ ಎಲ್ಲಾ ಡಿಪೊಗಳ ಮುಖ್ಯಸ್ಥರ ಗಮನಕ್ಕೆ ತಂದು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬಸ್ ನಿರ್ವಾಹಕರಿಗೂ ಸೂಚಿಸುವಂತೆ ನಿರ್ದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸಮಯ ವಿಸ್ತರಣೆ ಅವಧಿ ಇದೇ ಕೊನೆಯ ಬಾರಿಯಾಗಿದ್ದು, ಗಡುವಿನೊಳಗೆ ವಿದ್ಯಾರ್ಥಿಗಳು ಬಸ್ಪಾಸ್ನ ಸ್ಮಾರ್ಟ್ಕಾರ್ಡ್ಗಳನ್ನು ಪಡೆದುಕೊಳ್ಳಬೇಕು. ಈ ವಿಷಯವನ್ನು ಶಾಲಾ-ಕಾಲೇಜು ಮುಖ್ಯಸ್ಥರ ಗಮನಕ್ಕೂ ತರಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಪ್ರತಿಕ್ರಿಯಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos