ಲೋಕಸಭೆ ಚುನಾವಣೆ: ಖಾಸಗಿ ಬಸ್​ ದರ ಏರಿಕೆ

ಲೋಕಸಭೆ ಚುನಾವಣೆ: ಖಾಸಗಿ ಬಸ್​ ದರ ಏರಿಕೆ

ಬೆಂಗಳೂರು: ಲೋಕಸಭೆ ಚುನಾವಣೆಯ ರಾಜ್ಯದಲ್ಲಿ ಮೊದಲ ಹಂತದ ಮತಾದನ ಏಪ್ರಿಲ್‌ 26 ರಂದು ನಡೆಯಲಿದೆ. ಮತದಾನ ಮಾಡಲು ಊರುಗಳತ್ತ ತೆರಳಲು ಮತದಾರರು ಸಿದ್ದವಾಗಿದ್ದಾರೆ. ಆದರೆ ಇದೇ ಸದವಕಾಶವೆಂದು ಖಾಸಗಿ ಬಸ್​ ಮಾಲೀಕರು ಬೆಲೆ ಏರಿಕೆ ಮಾಡಿದ್ದಾರೆ. ಹೀಗಾಗಿ ಮತದಾನ ಮಾಡಲು ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳಲು ಮತದಾರರಿಗೆ ಸಾಕಷ್ಟು ತೊಂದರೆಯಾಗಿದೆ.

ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿದೆ ಮತದಾನ. ಮತದಾನಕ್ಕಾಗಿ ಸ್ವಂತ ಊರು ಬಿಟ್ಟು ಬಂದು ನಗರಗಳಲ್ಲಿ ಜೀವನ ಕಟ್ಕೊಂಡಿರೋರು ಈಗ ಒಂದು ದಿನದ ಮಟ್ಟಿಗೆ ತಮ್ಮೂರಿಗೆ ವಾಪಸ್ ಆಗುತ್ತಿದ್ದಾರೆ. ಇದೇ ಏಪ್ರಿಲ್ 26ಕ್ಕೆ ಎಲೆಕ್ಷನ್ ಇದೆ. 25ರಂದೇ ಸಾಕಷ್ಟು ಜನ ತಮ್ಮೂರುಗಳತ್ತ ಹೊರಡ್ತಿದ್ದಾರೆ. ಇದನ್ನೇ ಲಾಭ ಮಾಡ್ಕೊಂಡಿರುವ ಖಾಸಗಿ ಬಸ್ ಮಾಲೀಕರು ಡಬಲ್ ರೇಟ್ ಈಗಲೇ ಫಿಕ್ಸ್ ಮಾಡಿದ್ದಾರೆ.

ಬೇಡಿಕೆ ಹೆಚ್ಚಾಗುತ್ತಿದ್ದಂತೆ ಖಾಸಗಿ ಬಸ್ ದರ ಒನ್ ಟು ಡಬಲ್ ಆಗಿದೆ. ಮತದಾನಕ್ಕೆ ಊರಿಗೆ ತೆರಳಲು ಜನರೇ ಬಸ್ ಬುಕ್ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು, ಬುಕ್ಕಿಂಗ್​ ಆ್ಯಪ್​ಗಳಲ್ಲಿ ದರ ಹೆಚ್ಚು ಮಾಡಲಾಗಿದೆ. ಇನ್ನು ಖಾಸಗಿ ಬಸ್​ಗಳು ಕೂಡ 300-500 ರೂ. ದರ ಏರಿಕೆ‌ ಮಾಡಿವೆ.

 

ಫ್ರೆಶ್ ನ್ಯೂಸ್

Latest Posts

Featured Videos