ಬಸ್ ಡಿಕ್ಕಿ, ಓರ್ವ ಸಾವು, ೬ ಜನರ ಸ್ಥಿತಿ ಗಂಭೀರ

 ಬಸ್ ಡಿಕ್ಕಿ, ಓರ್ವ ಸಾವು, ೬ ಜನರ ಸ್ಥಿತಿ ಗಂಭೀರ

ಪೀಣ್ಯ:ಪಾನಮತ್ತನಾಗಿ ಚಾಲನೆ ಮಾಡುತ್ತಿದ್ದ ಕಾರಣಚಾಲಕನ ನಿಯಂತ್ರಣ ತಪ್ಪಿದ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಓರ್ವ ಮೃತ ಪಟ್ಟಿದ್ದು ಆರು ಜನರಿಗೆ ಗಂಭೀರ ಗಾಯಗಳಾಗಿದೆ.
ಬೆಂಗಳೂರು ತುಮಕೂರು ಮುಖ್ಯರಸ್ತೆಯ ೮ನೇ ಮೈಲಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಅಪಘಾತದ ವೇಳೆ ಪಾನಮತ್ತ ಚಾಲಕ ದೇವರಾಜ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಗಾಯಾಳುಗಳು ಬಸ್ ನಿಲ್ದಾಣದ ಸರಳುಗಳಿಗೆ ಸಿಲುಕಿಕೊಂಡ ಪರಿಣಾಮ ಪೀಣ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ, ಅತ್ಯಾಧುನಿಕ ಉಪಕರಣಗಳನ್ನ ಬಳಸಿ ಗಾಯಾಳುಗಳ ರಕ್ಷಣೆ ಮಾಡಿದ್ದಾರೆ.
ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬನ ಕಾಲು ಸಂಪೂರ್ಣ ಮುರಿದುಹೋಗಿದ್ದು ಒಟ್ಟು ೬ ಜನ ಗಾಯಾಳುಗಳ ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ಸಿಗೆ ಕಾಯುತ್ತಿದ್ದ ಕಲಬುರಗಿ ಮೂಲದ ಮಲ್ಲಪ್ಪ, ಕೊಳ್ಳೆಗಾಲ ಮೂಲದ ನಾಗಮಾದಪ್ಪ, ವಿನಯ್, ಶಿವಪ್ರಸಾದ್, ಶಿವಕುಮಾರ್ ಹಾಗೂ ಆಂಜನೇಯ ಎಂದು ಗುರುತಿಸಲಾಗಿದ್ದು, ಮೃತನು ರಾಯಚೂರು ಜಿಲ್ಲೆ ಲಿಂಗಸೂರಿನ ದ್ಯಾನಪ್ಪ (೪೦)ಘಟನೆಗೆ ಸಂಬಂಧಿಸಿದಂತೆ ಸಂಚಾರಿ ವಿಭಾಗದ ಜಂಟಿ ಆಯುಕ್ತರಾದ ರವಿಕಾಂತೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಪೀಣ್ಯ ಸಂಚಾರಿ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕ ದೇವರಾಜ್‌ನನ್ನ ವಶಕ್ಕೆ ಪಡೆದಿದ್ದಾರೆ.
ಬಸ್ ಸಂಪೂರ್ಣ ಖಾಲಿಯಾಗಿತ್ತು, ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆದೊಯ್ಯಲು ಬರುತ್ತಿದ್ದಾಗ ಘಟನೆ ಸಂಭವಿಸಿದೆ, ಸ್ಥಳಕ್ಕೆ ಪೀಣ್ಯ ಸಂಚಾರಿ ಪೋಲೀಸ್‌ರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos