ಕೇರಳ ಕಾಲೇಜಿನಲ್ಲಿ ಬುರ್ಕಾ ನಿಷೇಧ

ಕೇರಳ ಕಾಲೇಜಿನಲ್ಲಿ ಬುರ್ಕಾ ನಿಷೇಧ

ಕೇರಳ, ಮೇ. 2, ನ್ಯೂಸ್ ಎಕ್ಸ್ ಪ್ರೆಸ್: ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕ ದಾಳಿ ನಂತರ ಅಲ್ಲಿ ಬುರ್ಕಾ ಮೇಲೆ ನಿಷೇಧ ಹೇರಲಾಗಿದೆ. ಶ್ರೀಲಂಕಾದಂತೆ ಭಾರತದಲ್ಲೂ ಕೂಡ ಬುರ್ಕಾ ಮೇಲೆ ನಿಷೇಧ ಹೇರಬೇಕೆಂದು ಶಿವಸೇನೆ ಆಗ್ರಹಿಸಿತ್ತು.  ದೇಶದಲ್ಲಿ ಬುರ್ಕಾ ನಿಷೇಧದ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಈ ಮಧ್ಯೆ ಕೇರಳದ ಮುಸ್ಲಿಂ ಕಾಲೇಜು ಒಂದರಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೇರಳದ ಮಲಪ್ಪುರಂನ ಅಲ್ಪಸಂಖ್ಯಾತ ಕಾಲೇಜಿನಲ್ಲಿ ಬುರ್ಕಾ ಮೇಲೆ ನಿಷೇಧ ಹೇರಲಾಗಿದೆ. ವಿದ್ಯಾರ್ಥಿನಿಯರಿಗೆ ಬುರ್ಕಾ ಧರಿಸಿ ಕಾಲೇಜಿಗೆ ಬರದಂತೆ ಸೂಚನೆ ನೀಡಲಾಗಿದೆ.

ರಾವಣನ ಭೂಮಿಯಲ್ಲೇ ಬುರ್ಕಾ ನಿಷೇಧ ಮಾಡುತ್ತಾರೆಂದರೆ ರಾಮನ ಭೂಮಿಯಲ್ಲಿ ಏಕೆ ಬುರ್ಕಾ ಮೇಲೆ ನಿಷೇಧ ಹೇರಬಾರದು ಎಂದು ಶಿವಸೇನೆ ಪ್ರಶ್ನೆ ಮಾಡಿತ್ತು.

ಶಿವಸೇನೆ ಹೇಳಿಕೆಗೆ ಸಾಕಷ್ಟು ಪರ-ವಿರೋಧ ಹೇಳಿಕೆಗಳು ಕೇಳಿ ಬರ್ತಿವೆ. ಈ ಮಧ್ಯೆ ಕೇರಳ ಮುಸ್ಲಿಂ ಕಾಲೇಜಿನಲ್ಲಿ ಕೂಡ ಬುರ್ಕಾ ನಿಷೇಧ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos