ಮುತ್ತೂಟ್ ಫೈನಾನ್ಸ್ ಕಳ್ಳತನ ಪ್ರಕರಣ: ಇಬ್ಬರು ಬಂಧನ

ಮುತ್ತೂಟ್ ಫೈನಾನ್ಸ್ ಕಳ್ಳತನ ಪ್ರಕರಣ: ಇಬ್ಬರು ಬಂಧನ

ಬೆಂಗಳೂರು, ಜ. 01: ಡಿಸೆಂಬರ್ 23ರಂದ ಬೆಂಗಳೂರಿನ ಫ್ರೆಜರ್ ಟೌನ್ ನಲ್ಲಿರುವ ಮುತ್ತೋಟ್ ಫೈನಾನ್ಸ್ ನ ಬಾತ್ ರೂಂ ಗೋಡೆ ಕೊರೆದು, ಕನ್ನ ಹಾಕಿದ್ದ 10 ಜನರ ತಂಡ, 77 ಕೆಜಿ ಚಿನ್ನವನ್ನು ದೋಚಿಕೊಂಡು ತೆರಳಿತ್ತು. ಈ ಕುರಿತಂತೆ ವಿಶೇಷ ತಂಡವನ್ನು ರಚಿಸಿದ್ದ ಬೆಂಗಳೂರು ನಗರ ಪೊಲೀಸರು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿತ್ತು. ಇಂತಹ ಬಲೆಯಲ್ಲಿ ಮುತ್ತೋಟ್ ಫೈನಾನ್ಸ್ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂದಿಸಿದ್ದು, ಬಂಧಿತರಿಂದ 8 ಕೆಜಿ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.

ಕಳೆದ ಡಿ.23ರಂದು ನಡೆದ ಮುತ್ತೋಟ್ ಫೈನಾನ್ಸ್ ಕಚೇರಿಯ 77 ಕೆಜಿ ಚಿನ್ನ ಕನ್ನ ಪ್ರಕರಣದಲ್ಲಿ 10 ಜನರ ಗ್ಯಾಂಗ್ ಸಕ್ರೀಯವಾಗಿ ಕಾರ್ಯ ನಿರ್ವಹಿಸಿರುವುದನ್ನು ಪೊಲೀಸರು ತನಿಖೆಯಿಂದ ತಿಳಿದು ಬಂದಿತ್ತು. 10 ಜನರ ಆರೋಪಿಗಳು 77 ಕೆಜಿ ಒಟ್ಟಿಗೆ ಸಾಗಿಸರು ಆಗುವುದಿಲ್ಲ ಎಂಬುದಾಗಿ ತಮ್ಮ ಪಿಜಿಯಲ್ಲಿ ಚಿನ್ನವನ್ನು ಹಂಚಿಕೊಂಡಿದ್ದರು. ಇಂತಹ ಚಿನ್ನದಲ್ಲಿ ಕಚೇರಿಯ ಭದ್ರತಾ ಸಿಬ್ಬಂದಿಗಳಿಗೆ 8 ಕೆಜಿ ನೀಡಲಾಗಿತ್ತು. ಈ ಭದ್ರತಾ ಸಿಬ್ಬಂದಿಗಳು ನೇಪಾಳದ ಗಡಿಯಲ್ಲಿ ಇರುವುದನ್ನು ಪತ್ತೆ ಹಚ್ಚಿದ ವಿಶೇಷ ತಂಡ, ಇದೀಗ ಬಂಧಿಸಿ 8 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos