ಬಂಟ್ಸ್ ಹಾಸ್ಟೆಲ್ ಸರ್ಕಲ್ ಟ್ರಾಫಿಕ್ ಜಾಮಿಗೆ ಶೀಘ್ರ ಪರಿಹಾರ

  • In State
  • December 17, 2018
  • 192 Views
ಬಂಟ್ಸ್ ಹಾಸ್ಟೆಲ್ ಸರ್ಕಲ್ ಟ್ರಾಫಿಕ್ ಜಾಮಿಗೆ ಶೀಘ್ರ ಪರಿಹಾರ

ದಶಕಗಳ ಹಳೆಯ ರಸ್ತೆ ಅಗಲ ಯೋಜನೆಗೆ ಮಂಗಳೂರಿನಲ್ಲಿ ಚಾಲನೆ

ಒಂದೂವರೆ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬಂಟ್ಸ್ ಹಾಸ್ಟೆಲ್ ಸರ್ಕಲ್ -ಪಿವಿಎಸ್ ಜಂಕ್ಷನ್ ರಸ್ತೆ ಅಗಲೀಕರಣ ಯೋಜನೆಗೆ ಕೊನೆಗೂ ಚಾಲನೆ ದೊರೆತಿದೆ.

ಕಳೆದ ವಾರ ಬೃಹತ್ ಅಶ್ವತ್ಥ ವೃಕ್ಷವನ್ನು ಸ್ತಲಾಂತರ ಮಾಡಿದ ಬೆನ್ನಲ್ಲೆ ಅಂಗಡಿ ಮುಂಗಟ್ಟುಗಳನ್ನು ಭಾಗಶಃ ತೆರವು ಮಾಡುವ ಕೆಲಸ ಆರಂಭವಾಗಿದೆ. ಈ ಮಧ್ಯೆ, ರಸ್ತೆಗ ಅಡ್ಡವಾಗಿರುವ ವಿದ್ಯುತ್ ಕಂಬಗಳನ್ನು ಕೂಡ ಎತ್ತಂಗಡಿ ಮಾಡಲಾಗಿದೆ.

ರಸ್ತೆ ಮಾರ್ಜಿನ್ ಮೇಲೆ ಇರುವ ಸಣ್ಣ ಕಟ್ಟಗಳ ತೆರವಿಗ ಸ್ವಯಪ್ರೇರಿತರಾಗಿ ಅಂಗಡಿ ಮಾಲೀಕರು ಮುಂದಾಗಿದ್ದಾರೆ. ಇದೀಗ ಏನಿದ್ದರೂ ಮಂಗಳೂರು ಮಹಾನಗರಪಾಲಿಕೆ ರಸ್ತೆಯ ಬದಿ ಫುಟ್ ಪಾತ್ ಮತ್ತು ಚರಂಡಿ ತೆರವುಗೊಳಿಸಬೇಕಾಗಿದೆ.

ಈ ಮಧ್ಯೆ, ಒಂದು ಕಡೆಯಿಂದ ರಸ್ತೆ ಕಾಂಕ್ರೀಟೀಕರಣಕ್ಕೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕರಂಗಲಪಾಡಿಯಿಂದ ಬಂಟ್ಸ್ ಹಾಸ್ಟೆಲ್ ಗೇಟ್ ತನಕ ಹೊಸದಾಗಿ ಕಾಂಕ್ರೀಟ್ ಮಾಡುವ ಮೂಲಕ ರಸ್ತೆ ಅಗಲ ಅಗಲವಾಗಲಿದೆ.

ಮಂಗಳೂರಿನ ಹೃದಯ ಭಾಗದಲ್ಲಿ ಇರುವ ನಾಲ್ಕು ರಸ್ತೆಗಳು ಸಂದಿಸುವ ವೃತ್ತ ಇದಾಗಿದ್ದು ಪೀಕ್ ಅವರುಗಳಲ್ಲಿ ವಾಹನ ದಟ್ಟಮೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಆಗುತ್ತಿರುವುದು ಸಾಮಾನ್ಯವಾಗಿತ್ತು. ಮಂಗಳೂರಿನಿಂದ ಉಡುಪಿ ಕಡೆಗೆ, ಮತ್ತೊಂದು ಕತೆ ಮೂಡಬಿದಿರೆ, ಮಗದೊಂದೆಡೆ ಕಾಸರಗೋಡಿಗೆ ತೆರಳುವುದರ ಸಹಿತ ಬಹುತೇಕ ಎಲ್ಲ ಉರುಗಳ ವಾಹನಗಳು ಇದೇ ವೃತ್ತದ ಮೂಲಕ ಸಾಗಬೇಕಾಗುತ್ತದೆ.

ಕೆಲವು ಮಂದಿ ಅಕ್ರಮವಾಗಿ ಕಟ್ಟಡ ಕಟ್ಟಿಕೊಂಡಿರುವ ಕಾರಣ ಇಲ್ಲಿ ಸುಗಮ ಸಂಚಾರಕ್ಕೆ ತೊಡಕಾಗಿದೆ. ಇದೀಗ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ರಸ್ತೆ ಹೊಸ ರೂಪ ಪಡೆಯತೊಡಗಿವೆ.

ಫ್ರೆಶ್ ನ್ಯೂಸ್

Latest Posts

Featured Videos