ಕೋವಿಡ್ ತಡೆಗೆ ಸಹಕರಿಸಿ

ಕೋವಿಡ್ ತಡೆಗೆ ಸಹಕರಿಸಿ

ಮಾಲೂರು: ಪ್ರತಿಯೊಬ್ಬ ನಾಗರೀಕರು ಅಧಿಕಾರಿಗಳೊಂದಿಗೆ ಸಹಕಾರ ನೀಡಿದಾಗ ಮಾತ್ರ ಕೋವಿಡ್-೧೯ ತಡೆಗಟ್ಟಲು ಸಾಧ್ಯ ಎಂದು ತಹಸೀಲ್ದಾರ್ ಎಂ.ಮಂಜುನಾಥ್ ತಿಳಿಸಿದರು.
ಪಟ್ಟಣದ ೧೯ನೇ ವಾರ್ಡಿನ ಗಾಂಧಿ ವೃತ್ತ ಸಫಲಾಂಭ ದೇವಾಲಯ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ೧೯ನೇ ವಾರ್ಡಿನ ಸದಸ್ಯರ ವತಿಯಿಂದ ಹಮ್ಮಿಕೊಂಡಿದ್ದ ಕೋವಿಡ್ ತಪಾಸಣಾ ಶಿಬಿರ ಕರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯಾಧಿಕಾರಿ ಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ ಕೋವಿಡ್-೧೯ ತಡೆಗಟ್ಟಲು ತಾಲೂಕು ಆರೋಗ್ಯ ಇಲಾಖೆ. ಪುರಸಭೆ, ತಾಲೂಕು ಆಡಳಿತ, ಆಶಾ ಕರ‍್ಯಕರ್ತರು, ಪೋಲಿಸ್ ಇಲಾಖೆ ತಮ್ಮ ಜೀವನವನ್ನು ಮುಡಿಪಾಗಿಟ್ಟು ಸಾರ್ವಜನಿಕರ ಆರೋಗ್ಯವನ್ನು ಕಾಪಾಡುತ್ತಿದ್ದಾರೆ. ಎಂದು ಹೇಳಿದರು.
ಪುರಸಭಾ ಸದಸ್ಯೆ ಮಂಜುಳ ಮಂಜುನಾಥ್ , ಬಿ.ಎಲ್‌ಒ ಸಂಘದ ಅಧ್ಯಕ್ಷ ಜಿ.ಮುನಿಯಪ್ಪ, ನೋಡಲ್ ಆಧಿಕಾರಿ ಶೇಷಾದ್ರಿ, ಬಿಎಲ್‌ಒಗಳಾದ ನಂದೀಶ್, ಅಮರ್‌ನಾಥ್, ಮುಖಂಡ ಮುನಿಸ್ವಾಮಿ, ವೈಧ್ಯರಾದ ಡಾ.ಕವಿತ, ಎನ್.ಸಿ.ಒ ಮಹೇಶ್, ವರ್ಣ, ರುಕ್ಮಣಿ, ವರಲಕ್ಷ್ಮೀ, ಅಂಗನವಾಡಿ ಕರ‍್ಯಕರ್ತೆ ಯಲ್ಲಮ್ಮ ಸೇರಿದಂತೆ ವಾರ್ಡಿನ ನಾಗರೀಕರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos