ಬೆಂಗಳೂರು: ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನ ಇಂಧು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಭಾಷಣದ ಮೂಲಕ ಆರಂಭವಾಗಿದೆ. ತೆರಿಗೆ ಮತ್ತು ಅನುದಾನ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣದಲ್ಲೂ ಅದೇ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಗವರ್ನರ್ ಮೂಲಕ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕೌಂಟರ್ ಕೊಟ್ಟಿದ್ದಾರೆ.
ಕೇಸರಿ ಸಾಲು ಧರಿಸಿ ಬಿಜೆಪಿ ನಾಯಕರು ಸದನದಲ್ಲಿ ಜಯಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಜೈ ಭೀಮ್ ಎಂದು ಘೋಷಣೆ ಕೂಗಿದ್ದಾರೆ. ಆದರೆ ಯಾವುದೇ ಘೋಷಣೆ ಕೂಗದೆ ಜೆಡಿಎಸ್ ನಾಯಕರು ತಟಸ್ಥವಾಗಿತ್ತು.
ಬಿಜೆಪಿ ಸದಸ್ಯರ ಜೈ ಶ್ರೀ ರಾಮ್ ಘೋಷಣೆಗೆ ಪ್ರತಿಕ್ರಿಯೆ ವಾಗಿ ಸಚಿವ ಭೈರತಿ ಸುರೇಶ್ ಅವರು ಜೈ ಸಂವಿಧಾನ ಎಂದು ಘೋಷಣೆ ಕೂಗಿದರೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಜೈ ಭೀಮ್ ಜೈ ಬಸವಣ್ಣ ಘೋಷಣೆ ಕೂಗಿದರು. ಜೆಡಿಎಸ್ ಸದಸ್ಯರು ಯಾವುದೇ ಘೋಷಣೆ ಕೂಗದೆ ತಟಸ್ಥವಾಗಿ ಉಳಿದರು.