ಜ.18ರಿಂದ ಬೌದ್ಧ ವಿಚಾರ ಸಂಕಿರಣ

ಜ.18ರಿಂದ ಬೌದ್ಧ ವಿಚಾರ ಸಂಕಿರಣ

ಬೆಂಗಳೂರು,ಜ.16: ಟಿಬೆಟಿಯನ್ ಹೌಸ್ ಸಾಂಸ್ಕೃತಿಕ ಕೇಂದ್ರವು ಜ.18 ಮತ್ತು 19ರಂದು ಆಧುನಿಕ ವಿಜ್ಞಾನ ಮತ್ತು ಬೌದ್ಧಿಸಂ ತತ್ವ ಸಿದ್ಧಾಂತಗಳ ಕುರಿತ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ‌ ಕಾರ್ಯಕ್ರಮದ ಆಯೋಜಕಿ ತೆಂಜೀನ್ ಮಾತನಾಡಿ, ಬಸವನಗುಡಿಯ ಬಿ.ಪಿ ವಾಡೀಯಾ ಸಭಾಂಗಣದಲ್ಲಿ ಈ ವಿಚಾರ ಸಂಕಿರಣ ನಡೆಯಲಿದ್ದು, ಅಂದು 15ಕ್ಕೂ ಹೆಚ್ಚು ಭಾಷಣಕಾರರು ಪಾಲ್ಗೊಳ್ಳಲಿದ್ದಾರೆ. ಆಧುನಿಕ ವಿಜ್ಞಾನ ಮತ್ತು ಬೌದ್ಧಿಸಂ ಕುರಿತ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ವಿಚಾರ ಸಂಕಿರಣವು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ನಡೆಯಲಿದ್ದು ಆಸಕ್ತರು ವಿಚಾರ ಸಂಕಿರಣದಲ್ಲಿ ಭಾಗವಹಿಸುವಂತೆ ಅವರು ಹೇಳಿದ್ದಾರೆ.

ಈ ಸಂಕಿರಣದಲ್ಲಿ ಈಗಾಗಲೇ 150ಕ್ಕೂ ಹಚ್ಚು ಜನರು ಹೆಸರು ನೋಂದಾಯಿಸಿಕೊಂಡಿದ್ದು, ಈ ಸಂಕಿರಣದಲ್ಲಿ ಪಿಎಚ್ ಡಿ ಸಂಶೋಧನಾ ವಿದ್ಯಾರ್ಥಿಗಳು ಪ್ರಬಂಧ ಮಂಡನೆ ಮಾಡಲಿದ್ದಾರೆ. ಕೊಲ್ಲತ್ತಾದ ಪ್ರೊ.ಪಾರ್ಥಾಗೋಷ್, ಶಾಂತಿ ಯಗ್ನಿಕ್, ವಿಜಯ್ ಪ್ರಸಾದ್, ಡಾ. ಎ.ವಿ ಉಷಾದೇವಿ, ಡಾ. ರವಿ ಪ್ರಕಾಶ್, ಉಜ್ವಲ್ ಸೇನ್ ಸೇರಿದಂತೆ ದೇಶದ ಹಲವೆಡೆಗಳ ಗಣ್ಯರು ವಿಚಾರ ಸಂಕಿರಣದಲ್ಲಿ ಹಲವು ವಿಷಯಗಳನ್ನು ‌ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos