ಬಿಎಸ್ವೈ ಗೆ ಮತ್ತೆ ಸಿಎಂ ಹುದ್ದೆ?

ಬಿಎಸ್ವೈ ಗೆ ಮತ್ತೆ ಸಿಎಂ ಹುದ್ದೆ?

ಬಿಎಸ್ವೈ ಗೆ ಮತ್ತೆ ಸಿಎಂ ಹುದ್ದೆ?

ಬೆಂಗಳೂರು, ಜೂನ್. , ನ್ಯೂಸ್ ಎಕ್ಸ್ ಪ್ರೆಸ್  :ಸೋಲಿನಿಂದ ಕಂಗೆಟ್ಟಿದ್ದ ದೋಸ್ತಿ ಸರ್ಕಾರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಸೋಲಿನ ಅವಮಾನದಿಂದ ಸಿಎಂ ಕುಮಾರಸ್ವಾಮಿ ತಮ್ಮ ಗಮನವನ್ನು ಜನರತ್ತ ಹರಿಸಿದ್ದಾರೆ. ಇತ್ತ ಸಚಿವ ಸಂಪುಟ ಪನರ್‌ರಚನೆ ಇಲ್ಲ ಅನ್ನೊÃದು ಗೊತ್ತಾಗ್ತಿದಂತೆ ರೆಬಲ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಸುಮಾರು ೧೦ ಮಂದಿ ರೆಬಲ್ ಶಾಸಕರು ಬಿಜೆಪಿ ಸೇರ್ತಾರೆ ಅನ್ನೊÃ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ) (ಇಂಟ್ರೊÃ )

 

ಬೆಂಗಳೂರು, ಜೂನ್ ೭: ಸೋಲಿನಿಂದ ಕಂಗೆಟ್ಟಿದ್ದ ದೋಸ್ತಿ ಸರ್ಕಾರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಸೋಲಿನ ಅವಮಾನದಿಂದ ಸಿಎಂ ಕುಮಾರಸ್ವಾಮಿ ತಮ್ಮ ಗಮನವನ್ನು ಜನರತ್ತ ಹರಿಸಿದ್ದಾರೆ. ಇತ್ತ ಸಚಿವ ಸಂಪುಟ ಪನರ್‌ರಚನೆ ಇಲ್ಲ ಅನ್ನೊÃದು ಗೊತ್ತಾಗ್ತಿದಂತೆ ರೆಬಲ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಸುಮಾರು ೧೦ ಮಂದಿ ರೆಬಲ್ ಶಾಸಕರು ಬಿಜೆಪಿ ಸೇರ್ತಾರೆ ಅನ್ನೊÃ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ರಮೇಶ್ ದೂರ ದೂರ

ಇದಕ್ಕೆ ನಿದರ್ಶನವೆಂಬಂತೆ ಬೆಳಗಾವಿ ಜಿಲ್ಲೆಯಲ್ಲಿ ಉಲ್ಬಣಿಸಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಕರೆದಿರುವ ಸಭೆಯಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೂರ ಉಳಿದಿದ್ದಾರೆ.

ರಾಜಕೀಯ ಬಣ್ಣ ಕಟ್ಟಲಾಗುತ್ತದೆ ಎಂಬ ಕಾರಣಕ್ಕಾಗಿ ತಾವು ಸಭೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಬಗೆಹರಿಸಲು ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣ ನದಿಗೆ ನೀರು ಬಿಡಿಸಲು ಆ ಸರ್ಕಾರದ ಮೇಲೆ ಒತ್ತಡ ಹಾಕಲು ಕರ್ನಾಟಕ ಸರ್ಕಾರ ಪ್ರಯತ್ನಿಸುತ್ತಿದ್ದು, ಈ ಸಂಬಂಧ ಚರ್ಚೆ ನಡೆಸಲು ಮುಖ್ಯಮಂತ್ರಿಗಳು ಜನಪ್ರತಿನಿಧಿ ಹಾಗೂ ಸಂಘಟನೆಗಳ ಸಭೆ ಕರೆದಿದ್ದಾರೆ.

ಸಭೆಯಲ್ಲಿ ಭಾಗವಹಿಸದಂತೆ ಅಥಣಿ ಶಾಸಕ ಮಹೇಶ್ ಕುಮಟ್ಟಳಿ ಹಾಗೂ ರೈತ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು, ಸೆವೆನ್ ಮಿನಿಷ್ಟರ್ ಕ್ವಾರ್ಟಸ್ ಮಾಜಿ ಸಚಿವ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ನಡೆದ ಮಾತುಕತೆಯಲ್ಲಿ ರಮೇಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳು ಕರೆದಿರುವ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿರುವುದಾಗಿ ತಿಳಿದುಬಂದಿದೆ.

ಮೊದಲು ನೀವು ಸಿಎಂ ಭೇಟಿ ಮಾಡಿ ಚರ್ಚೆ ಮಾಡಿ ನಂತರ ದೂರವಾಣಿ ಮೂಲಕ ನಾನು ಅವರೊಂದಿಗೆ ಮಾತನಾಡುತ್ತೇನೆಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆಂದು ಶಾಸಕ ಮಹೇಶ್ ಕುಮಟಹಳ್ಳಿ ಹೇಳಿದ್ದಾರೆ.

ಆದರೆ ಆಂತರಿಕ ಚರ್ಚೆಯಲ್ಲಿ ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿಯನ್ನು ತಾವು ಭೇಟಿ ಮಾಡಿದರೆ ರಾಜಕೀಯವಾಗಿ ನಾನಾ ಬಣ್ಣ ಕಟ್ಟುತ್ತಾರೆ. ಸದ್ಯಕ್ಕೆ ನಾನು ತೆಗೆದುಕೊಂಡಿರುವ ನಿರ್ಧಾರ ಅಚಲವಾಗಿದೆ.

ಎಲ್ಲವೂ ಸ್ಪಷ್ಟತೆ ಕಾಣುವವರೆಗೂ ಗೊಂದಲಕ್ಕೆ ಅವಕಾಶವಾಗದಂತೆ ಪ್ರಮುಖ ನಾಯಕರಿಂದ ಅಂತರ ಕಾಯ್ದುಕೊಳ್ಳುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ಹೊರತಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಕರೆದಿರುವ ಸಭೆಯಲ್ಲಿ ಮಹೇಶ್ ಕುಮಟಹಳ್ಳಿ ಮತ್ತು ಕೆಲವು ಸಂಘಟನೆಗಳ ಮುಖಂಡರು ಭಾಗವಹಿಸಿದ್ದಾರೆ.

ಬಿಜೆಪಿಯಲ್ಲಿ ‘ಆಪರೇಷನ್’ ಸದ್ದು..!

ಇನ್ನು ಇತ್ತ ಬಿಜೆಪಿ ಶಾಸಕಾಂಗ ಸಭೆಯಲ್ಲಿ  ಆಪರೇಷನ್ ವಿಚಾರ ದೊಡ್ಡ ಸದ್ದು ಮಾಡಿತ್ತು. ಕೈಗೆ ಬರುತ್ತಿದ್ದ ಅಧಿಕಾರ ನಮ್ಮವರಿಂದಲೇ ನಮ್ಮ ಕೈತಪ್ಪಿತು. ಅನಗತ್ಯವಾಗಿ ನಮ್ಮವರೇ ಮೂಗು ತೂರಿಸಿ ದೋಸ್ತಿಗಳ ನಡುವಿನ ಡ್ಯಾಮೇಜ್ ಕಂಟ್ರೋಲ್ ಆಗುವಂತೆ ಮಾಡಿಬಿಟ್ಟರು. ಬಿಜೆಪಿ ನಾಯಕರು ಹೋದಲ್ಲಿ, ಬಂದಲ್ಲಿ ಸರ್ಕಾರ ಪತನಗೊಳ್ಳುತ್ತದೆ ಎಂದು ಹೇಳಿದ್ದೇ ಬಿಜೆಪಿಗೆ ಹಿನ್ನಡೆಯಾಯಿತು. ಆಪರೇಷನ್ ಕಮಲಕ್ಕೆ ಸಂಬಂಧ ಇಲ್ಲದವರು, ಸರ್ಕಾರ ರಚನೆ ಬಗ್ಗೆ ಮಾಹಿತಿ ಇಲ್ಲದವರೂ ಸರ್ಕಾರ ಪತನಗೊಳ್ಳುತ್ತದೆ ಎಂದು ಮಾತಾಡಿ ಎಡವಟ್ಟಾಗುವಂತಾಯ್ತು ಇಲ್ಲದಿದ್ದರೆ ಇಷ್ಟೊತ್ತಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿರುತ್ತಿತ್ತು ಎಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲ ಮುಖಂಡರ ವಿರುದ್ಧ ಹಿರಿಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಬಿಜೆಪಿ ಆಪರೇಷನ್ ಕಮಲದಿಂದ ದೂರ ಸರಿದ್ದಿದ್ದು, ತೆರೆಮರೆಯಲ್ಲೆÃ ಆಟವಾಡಲು ನಿರ್ಧರಿಸಿದೆ.

( ‘ರೆಬಲ್’ ಮೀಟಿಂಗ್..!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾಗಿದ್ದಾರೆ. ಅದರ ಬೆನ್ನಲ್ಲೆÃ ಶನಿವಾರ ತಮ್ಮ ಆಪ್ತ ಶಾಸಕರ ಸಭೆ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ರಮೇಶ್ ಜಾರಕಿಹೊಳಿ ಜೊತೆಯಲ್ಲಿ ೮ ಶಾಸಕರು ಸೇರಲಿದ್ದಾರೆ ಎನ್ನಲಾಗಿದೆ.

ನಗರದ ಸೆವೆನ್ ಮಿನಿಸ್ಟಿçà ಕ್ವಾಟರ‍್ಸ್ ನಲ್ಲಿರುವ ರಮೇಶ್ ಜಾಕಿ ಹೊಳಿ ತಮ್ಮ ಆಪ್ತ ಶಾಸಕರ ಜೊತೆ ಸಭೆ ನಡೆಸಲಿದ್ದು, ಕಾಂಗ್ರೆಸ್ ಗೆ ಅಧಿಕೃತವಾಗಿ ಗುಡ್‌ಬೈ ಹೇಳಿ ಬಿಜೆಪಿಯನ್ನು ಸೇರಲಿದ್ದಾರೆಯೇ ಎಂಬ ಕೂತುಹಲ ಮೂಡಿದೆ. ಒಂದೆಡೆ ಪಕ್ಷದ ವಿರುದ್ಧ ಸಿಡಿದೆದ್ದಿರುವ ರಮೇಶ್ ಜಾರಕಿ ಹೊಳಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಶತಪ್ರಯತ್ನ ನಡೆಸಿರುವ ಬೆನ್ನಲ್ಲೇ ಬಿಜೆಪಿಯವರು ರಮೇಶ್ ಜಾರಕಿ ಹೊಳಿ ಮತ್ತು ಅವರ ಆಪ್ತರನ್ನು ಸೆಳೆದು ಸಮ್ಮಿಶ್ರ ಸರ್ಕಾರಕ್ಕೆ ಖೆಡ್ಡಾ ತೋಡುವ ಮುಹೂರ್ತವನ್ನು ನಿಗದಿಪಡಿಸಲು ಮುಂದಾಗಿದ್ದಾರೆ.) ( ಬಾಕ್ಸ್)

ಆರ್‌ಎಸ್‌ಎಸ್ ನಿರ್ದೇಶನ

ಸದಾಶಿವನಗರದ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ನಡೆದ ಸಂಸದರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಬಿಜೆಪಿಗೆ ಬರುವವರನ್ನು ವಿಶೇಷವಾಗಿ ಮುತುವರ್ಜಿ ವಹಿಸಿ ಎಂದು ಸಂಘ ಪರಿವಾರದ ನಾಯಕರು ಸಲಹೆ ಕೊಟ್ಟಿದ್ದರು.

ಪಕ್ಷಕ್ಕೆ ಯಾರೇ ಬಂದರೂ ಅವರನ್ನು ತಾತ್ಸಾರದಿಂದ ನೋಡದೆ ಹೆಚ್ಚಿನ ಗಮನ ಹರಿಸಬೇಕು. ರಮೇಶ್ ಜಾರಕಿ ಹೊಳಿ ಸೇರಿದಂತೆ ಯಾರೇ ಬಂದರೂ ಸೂಕ್ತವಾದ ಸ್ಥಾನಮಾನ ನೀಡಬೇಕೆಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಕೆಳಹಂತದ ನಾಯಕರಿಗೆ ಮಾರ್ಗದರ್ಶನ ನೀಡಿದ್ದರು. ಆರ್‌ಎಸ್‌ಎಸ್ ನಾಯಕರು ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ರಮೇಶ್ ಜಾರಕಿ ಹೊಳಿ ತಮ್ಮ ಮುಂದಿನ ರಾಜಕೀಯ ನಡವಳಿಕೆ ಕುರಿತಂತೆ ತಮ್ಮ ಸಮುದಾಯದ ಶಾಸಕರೂ ಸೇರಿದಂತೆ ಆಪ್ತರ ಜೊತೆ ಮಾತುಕತೆ ನಡೆಸಲಿದ್ದಾರೆ. ಶಾಸಕರಾದ ಮಹೇಶ್ ಕುಮಟಳ್ಳಿ, ಶಿವಾನಂದ ಕೌಜಲಗಿ, ಬಿ.ನಾಗೇಂದ್ರ, ಪ್ರತಾಪ್‌ಗೌಡ ಪಾಟೀಲ್ ಸೇರಿದಂತೆ ೮ ಕ್ಕೂ ಹೆಚ್ಚು ಶಾಸಕರು ಈ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

( ಹೈಕಮಾಂಡ್ ಹೇಳಿದ್ದೆÃನು?

ಕಳೆದ ವಾರ ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಪ್ರಸ್ತುತ ಕರ್ನಾಟಕದಲ್ಲಿನ ಬೆಳವಣಿಗೆಗಳ ಕುರಿತಂತೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಗಮನಕ್ಕೆ ತಂದಿದ್ದರು. ಪಕ್ಷಕ್ಕೆ ಯಾರೇ ಬಂದರೂ ಅಭ್ಯಂತರವಿಲ್ಲ. ಆದರೆ ಬಂದವರೆಲ್ಲರೂ ನಮಗೆ ಸ್ಥಾನಮಾನ ನೀಡಬೇಕು ಎಂದು ಪಟ್ಟು ಹಿಡಿಯುವುದು, ಇಲ್ಲವೆ ಸರ್ಕಾರವನ್ನೇ ಬ್ಲಾಕ್‌ಮೇಲ್ ಮಾಡುವ ತಂತ್ರವನ್ನು ಅನುಸರಿಸಬಾರದೆಂಬ ಷರತ್ತು ವಿಧಿಸಿದ್ದರು.) ( ಬಾಕ್ಸ್ ಐಟಂ)

ಹೈಕಮಾಂಡ್ ನೀಡಿದ ಸೂಚನೆಯನ್ನು ಯಡಿಯೂರಪ್ಪ, ರಮೇಶ್ ಜಾರಕಿಹೊಳಿ ಗಮನಕ್ಕೆ ತಂದಿದ್ದು, ಬಿಜೆಪಿಗೆ ಬಂದರೆ ಇಂತಹದ್ದೇ ಸ್ಥಾನಮಾನ ನೀಡಬೇಕೆಂಬ ಷರತ್ತುಗಳನ್ನು ವಿಧಿಸಬಾರದೆಂದು ಸೂಚನೆ ಕೊಟ್ಟಿದ್ದಾರೆ. ಇದನ್ನು ಬಹುತೇಕ ಒಪ್ಪಿಕೊಂಡಿರುವ ಜಾರಕಿ ಹೊಳಿ ಭವಿಷ್ಯದಲ್ಲಿ ತಾವು ಬಿಜೆಪಿಗೆ ಬಂದರೆ ಯಾವುದೇ ತೊಂದರೆ ಬರುವುದಿಲ್ಲ. ಆದರೆ ತಮ್ಮ ಬೆಂಬಲಿಗರ ಹಿತವನ್ನು ಕಾಪಾಡುವುದು ಅನಿವಾರ್ಯ ಎಂದಿದ್ದಾರೆ. ಇದಕ್ಕೆ ಯಡಿಯೂರಪ್ಪ ಕೂಡ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಶನಿವಾರ ರಮೇಶ್ ಜಾರಕಿ ಹೊಳಿ ಮುಂದಿನ ಬೆಳವಣಿಗೆಗಳ ಕುರಿತಂತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಎಷ್ಟು ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂಬುದರ ಮೇಲೆ ಸಮ್ಮಿಶ್ರ ಸರ್ಕಾರದ ಭವಿಷ್ಯ ಅಡಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos