ಆನೆ ಗುರುತಿಗೆ ಒತ್ತಿದರೆ ಕಮಲಕ್ಕೆ ಮತ ಬೀಳುವುದಂತೆ…!

ಆನೆ ಗುರುತಿಗೆ ಒತ್ತಿದರೆ ಕಮಲಕ್ಕೆ ಮತ ಬೀಳುವುದಂತೆ…!

ನವದೆಹಲಿ, ಏ. 12, ನ್ಯೂಸ್ ಎಕ್ಸ್ ಪ್ರೆಸ್: ಮೊದಲ ಹಂತದ ಲೋಕಸಭಾ ಚುನಾವಣೆ ಇಂದು ಪ್ರಾರಂಭವಾಗಿದ್ದು.ಉತ್ತರ ಪ್ರದೇಶದಲ್ಲಿ ಆನೆ ಗುರುತಿಗೆ ಮತ ಹಾಕಿದರೆ ಅದು ಕಮಲದ ಗುರುತಿಗೆ ಮತ ರವಾನೆಯಾಗುತ್ತಿದೆ ಎಂದು ಬಿಎಸ್ಪಿ ಗಂಭೀರ ಆರೋಪ ಮಾಡಿದೆ. ಈ ವಿಚಾರವಾಗಿ ಎಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಬಿಎಸ್ಪಿ ನಾಯಕ ಸತೀಶ್ ಚಂದ್ರ ಮಿಶ್ರಾ”ನಾವು ಇನ್ನೊಂದು ದೂರನ್ನು ಸ್ವೀಕರಿಸಿ ಮತಯಂತ್ರದ ವೀಡಿಯೋ ಕ್ಲಿಪ್ ನ್ನು ಕಳುಹಿಸಿದ್ದೇವೆ.ಇದರಲ್ಲಿ ಆನೆ ಗುರುತಿಗೆ ಹಾಕಿದ ಮತವು ಕಮಲಕ್ಕೆ ಹೋಗುತ್ತಿದೆ. ನಾವು ಈ ಬಗ್ಗೆ ದೂರನ್ನು ನೀಡಿದ್ದೇವೆ.ಆದರೆ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ” ಎಂದು ಅವರು ಆರೋಪಿಸಿದ್ದಾರೆ. ಇನ್ನು ಮುಂದುವರೆದು “ಉತ್ತರ ಪ್ರದೇಶದಲ್ಲಿ ಪೋಲಿಸ್ ಹಾಗೂ ಆಡಳಿತ ವಿಭಾಗವು ದಲಿತರಿಗೆ ಮತದಾನ ಮಾಡಲು ಅವಕಾಶ ನೀಡುತ್ತಿಲ್ಲ. ನಾವು ಈಗಾಗಲೇ ಚುನಾವಣಾ ಆಯೋಗಕ್ಕೆ ಈ ಕುರಿತಾಗಿ ದೂರು ನೀಡಿ ತಕ್ಷಣ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದೇವೆ ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ಈ ಬಾರಿ ಸಮಾಜವಾದಿ ಪಕ್ಷ ಹಾಗೂ ಬಿಎಸ್ಪಿ ಪಕ್ಷಗಳು ಬಿಜೆಪಿಯನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಮೈತ್ರಿ ಮಾಡಿಕೊಂಡಿವೆ. ಕಳೆದ ಬಾರಿ ಉತ್ತರ ಪ್ರದೇಶದಲ್ಲಿ 70ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos