ಫೀನಿಕ್ಸ್‌ ನಂತೆ ಎದ್ದ ಮುಂಬಯಿ ಶೇರು 361 ಅಂಕ ಜಿಗಿತ

  • In Country
  • December 8, 2018
  • 188 Views
ಫೀನಿಕ್ಸ್‌ ನಂತೆ ಎದ್ದ ಮುಂಬಯಿ ಶೇರು 361 ಅಂಕ ಜಿಗಿತ

ಮುಂಬಯಿ : ಕಳೆದ ನಿರಂತರ ಮೂರು ದಿನಗಳಿಂದ ಸೋಲಿನ ಹಾದಿ ಹಿಡಿದಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 361.12 ಅಂಕಗಳ ಉತ್ತಮ ಗಳಿಕೆಯೊಂದಿಗೆ 35,673.25 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 92.55 ಅಂಕಗಳ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು 10,693.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ಧನಾತ್ಮಕತೆ, ಕಚ್ಚಾ ತೈಲ ಬೆಲೆ ಇಳಿಕೆ, ಡಾಲರ್‌ ಎದುರು ರೂಪಾಯಿ ಚೇತರಿಕೆಯೇ ಮೊದಲಾದ ಕಾರಣಗಳು ಮುಂಬಯಿ ಶೇರು ಪೇಟೆಗೆ ಹೊಸ ಶಕ್ತಿ ತುಂಬಿದವು. ಕೋಟಕ್‌ ಬ್ಯಾಂಕ್‌ ಶೇರು ಶೇ.9ರ ಏರಿಕೆಯನ್ನು ಕಂಡದ್ದು ಇಂದಿನ ವಿಶೇಷವೆನಿಸಿತು.

ಉಳಿದಂತೆ ಅದಾನಿ ಪೋರ್ಟ್‌, ಬಜಾಜ್‌ ಆಟೋ, ಇನ್‌ಫೋಸಿಸ್‌, ಏಶ್ಯನ್‌ ಪೇಂಟ್‌, ಮಾರುತಿ, ಎಚ್‌ಯುಎಲ್‌, ಲಾರ್ಸನ್‌, ಮಹೀಂದ್ರ, ಐಸಿಐಸಿಐ ಬ್ಯಾಂಕ್‌ ಮತ್ತು ರಿಲಯನ್ಸ್‌ ಶೇರುಗಳು ಶೇ.3ರಷ್ಟು ಏರಿದವು.

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,723 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,097 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,472 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 154 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos