ಬೃಹತ್ ದವಡೆ ಹಲ್ಲು ಪತ್ತೆ!

ಬೃಹತ್ ದವಡೆ ಹಲ್ಲು ಪತ್ತೆ!

ನೈರೋಬಿಯ, ಆ.13 : ಇದು ಮನುಷ್ಯರನ್ನೇ ತಿನ್ನುವ ಪ್ರಾಣಿಯಾಗಿದೆ. 1,500 ಕೆಜಿ ಇರುವ ನೈರೋಬಿಯಲ್ಲಿ 23 ದಶಲಕ್ಷ ವರ್ಷಗಳ ಹಿಂದಿನ ಬೃಹತ್ ಕೋರೆಹಲ್ಲುಗಳೊಂದಿಗೆ ದವಡೆ ಮೂಳೆ ಸಿಕ್ಕಿದೆ ಎಂದು ಅಮೆರಿಕಾದ ಸಂಶೋಧಕ ಜಾಬ್ ಕಿಬಿ ತಿಳಿಸಿದ್ದಾರೆ. ನೈರೋಬಿಯ ನ್ಯಾಷನಲ್ ಮ್ಯೂಸಿಯಂನ ಹಿಂಬದಿ ಕಚೇರಿಯ ಒಳಗೆ ಪತ್ತೆಯಾಗಿದೆ. ಈ ಅವಶೇಷವು ಹಿಮಕರಡಿಯ ದವಡೆಗಿಂತ ದೊಡ್ಡದಾಗಿದ್ದು, ಇದೊಂದು ಮಾಂಸಾಹಾರಿ ಪ್ರಾಣಿಯದ್ದಾಗಿದೆ. ಸಸ್ತನಿ ಕೆನ್ಯಾದಲ್ಲಿ ಜೀವಿಸಿದ್ದ ಕುರುಹುಗಳು ದೊರೆತಿವೆ. ಆಫ್ರಿಕಾದಲ್ಲಿ ದೊರೆತಿರುವ ಅತ್ಯಂತ ದೊಡ್ಡ ಸಸ್ತನಿಯ ಅವಶೇಷ ಇದಾಗಿದೆ. ಇದರ ಹೆಸರು ಸಿಂಬಾಕುಬ್ವಾ ಕುಟೊಕಾಫ್ರಿಕಾ ಎಂದಿದ್ದಾರೆ. ದವಡೆ ಮೂಳೆಯನ್ನು ಕಳೆದ 40 ವರ್ಷಗಳಿಂದ ಮ್ಯೂಸಿಯಂನ ಡ್ರಾವರ್ ನಲ್ಲಿ ಇಡಲಾಗಿತ್ತು ಮತ್ತು ಇದರ ಬಗ್ಗೆ ಯಾರೂ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ ಎಂದು ಮ್ಯೂಸಿಯಂನ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos