ಅ.15ಕ್ಕೆ ಬ್ರಿಟನ್ ಚುನಾವಣೆ?

ಅ.15ಕ್ಕೆ ಬ್ರಿಟನ್ ಚುನಾವಣೆ?

ಲಂಡನ್ , ಸೆ. 5 : ಬ್ರೆಕ್ಸಿಟ್ಗೆ ಸಂಬಂಧಿಸಿದಂತೆ ಬ್ರಿಟನ್ನಲ್ಲಿ ಅ.15ರಂದು ಚುನಾವಣೆ ನಡೆಯುವ ಸಾಧ್ಯತೆ ಇದೆ. ಹಾಲಿ ಪ್ರಧಾನಿ ಬೋರಿಸ್ ಜಾನ್ಸನ್, ದೇಶದಲ್ಲಿ ಅವಧಿ ಪೂರ್ವ ಚುನಾವಣೆಯಾಗಲಿ ಎಂದು ಆಶಿಸಿದ್ದಾರೆ.
ಈ ನಿಟ್ಟಿನಲ್ಲಿ ವಿಪಕ್ಷಗಳ ನಾಯಕರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ಉತ್ತಮ ಎಂದು ಹೇಳಿದ್ದಾರೆ. ಮಂಗಳವಾರ, ಬ್ರೆಕ್ಸಿಟ್ಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ನಡೆದಿದ್ದ ಮತದಾನದ ವೇಳೆ, ಜಾನ್ಸನ್ಗೆ ಅವರಿಗೆ ಮುಖಭಂಗವಾಗಿತ್ತು.
ಏನಿದು ಬ್ರೆಕ್ಸಿಟ್ ?
ಬ್ರೆ ಅಂದರೆ ಬ್ರಿಟನ್ . ಎಕ್ಸಿಟ್ ಅಂದರೆ ಹೊರಗೆ ಹೋಗು . ಬ್ರಿಟನ್ ಹೊರಗೆ ಹೋಗುವುದು ಎಂಬ ಶಬ್ದದ ಆರಂಭಿಕ ಪದಗಳನ್ನು ಜೋಡಿಸಿ ಬ್ರೆಕ್ಸಿಟ್ ಎಂಬ ಪದಪುಂಜ ರಚಿಸಲಾಗಿದೆ. ಅಂದರೆ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಕ್ಕೆ ಬರುವುದನ್ನು ಅತ್ಯಂತ ಸಂಕ್ಷಿಪ್ತ ರೂಪದಲ್ಲಿ ಈ ಶಬ್ದ ಸೂಚಿಸುತ್ತದೆ. ಈ ಹಿಂದೆ ಗ್ರೀಸ್ ಕೂಡ ಒಕ್ಕೂಟದಿಂದ ಹೊರಹೋಗಬೇಕು ಎಂಬ ಕೂಗು ಎದ್ದಾಗ ಗ್ರೀಕ್ಸಿಟ್ ಎಂಬ ಪದಪುಂಜ ಸಿದ್ಧಗೊಂಡಿತ್ತು. ಅಂದರೆ ಐರೋಪ್ಯ ಒಕ್ಕೂಟದಿಂದ ಗ್ರೀಕ್ ಹೊರಕ್ಕೆ ತೆರಳುವುದು ಎಂದಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos