ಅರ್ಧ ಶತಕ ಚಚ್ಚಿ ಬಿಬಿಎಲ್‌ಗೆ ನಿವೃತ್ತಿ ಘೋಷಿಸಿದ ಬ್ರೆಂಡನ್ ಮೆಕಲಮ್!

ಅರ್ಧ ಶತಕ ಚಚ್ಚಿ ಬಿಬಿಎಲ್‌ಗೆ ನಿವೃತ್ತಿ ಘೋಷಿಸಿದ ಬ್ರೆಂಡನ್ ಮೆಕಲಮ್!

ಸಿಡ್ನಿ: ಆಸ್ಟ್ರೇಲಿಯಾದ ವೃತ್ತಿಪರ ಟಿ20 ಕ್ರಿಕೆಟ್ ಟೂರ್ನಿಯಾದ ಬಿಗ್ ಬ್ಯಾಷ್ ಲೀಗ್‌ (ಬಿಬಿಎಲ್‌)ನಿಂದ ನ್ಯೂಜಿಲ್ಯಾಂಡ್ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ನಿವೃತ್ತಿ ಘೋಷಿಸಿದ್ದಾರೆ. ಕೋಚಿಂಗ್‌ನತ್ತ ಗಮನ ಹರಿಸುವ ಇಂಗಿತವನ್ನು ಮೆಕಲಮ್ ತೋರಿಕೊಂಡಿದ್ದಾರೆ.

ನ್ಯೂಜಿಲ್ಯಾಂಡ್ ರಾಷ್ಟ್ರೀಯ ತಂಡದ ಪ್ರಮುಖ ಆಟಗಾರರಾಗಿದ್ದ ಬ್ರೆಂಡನ್, 2016ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು.

ಭಾನುವಾರ ಬಿಬಿಎಲ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಮೆಕಲಮ್ ಅವರ ಬ್ರಿಸ್ಬೇನ್ ಹೀಟ್ ತಂಡ 6 ವಿಕೆಟ್ ಗಲುವನ್ನಾಚರಿಸಿದ ಬಳಿಕ ಮೆಕಲಮ್ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ‘2019ರಲ್ಲಿ ವಿಶ್ವದಾದ್ಯಂತ ನಡೆಯುವ ಬೇರೆಬೇರೆ ಟಿ20 ಕ್ರಿಕೆಟ್‌ನಲ್ಲಿ ನಾನು ಪಾಲ್ಗೊಳ್ಳುತ್ತೇನೆ. ಅನಂತರ ನಾನು ತರಬೇತುದಾರ ವೃತ್ತಿಯತ್ತ ಗಮನ ಹರಿಸುವುದರಲ್ಲಿದ್ದೇನೆ’ ಎಂದು ಬ್ರೆಂಡನ್ ಹೇಳಿದ್ದಾಗಿ ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ. ಅಂತಿಮ ಬಿಬಿಎಲ್ ಪಂದ್ಯದಲ್ಲಿ 37ರ ಹರೆಯದ ಮೆಕಲಮ್ 39 ಎಸೆತಗಳಿಗೆ 51 ರನ್ ಚಚ್ಚಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos