ತಳಿ ಸಂಮೃದ್ದಿ ಯೋಜನೆ ಕಾರ್ಯಾಗಾರ

  • In State
  • August 14, 2020
  • 162 Views
ತಳಿ ಸಂಮೃದ್ದಿ ಯೋಜನೆ ಕಾರ್ಯಾಗಾರ

ಮಾಲೂರು:ರಾಜ್ಯದಲ್ಲಿಯೇ ತಳಿ ಸಂಮೃದ್ಧಿ ತಂತ್ರಾಂಶ ಯೋಜನೆಯಡಿ ೨೩ ಗುಧ ಗರ್ಭದಾರಣೆ ಕಾರ್ಯಕರ್ತರಿಗೆ  ಮಾಹಿತಿ ಶೇಖರಣೆ ಮಾಡಲು ಟ್ಯಾಬ್ ವಿತರಿಸಲಾಗುತ್ತಿದೆ ಎಂದು ಶಾಸಕ ಹಾಗೂ ಕೋಚಿಮುಲ್ ಕೆ.ವೈ.ನಂಜೇಗೌಡ ಹೇಳಿದರು.

ಪಟ್ಟಣದ ಕೋಚಿಮುಲ್ ಶಿಭಿರ ಕಛೇರಿಯ ಸಭಾಂಗಣದಲ್ಲಿ ಕೋಚಿಮುಲ್ ವತಿಯಿಂದ ಹಮ್ಮಿಕೊಂಡಿದ್ದ ತಳಿ ಸಂಮೃದ್ಧಿ ತಂತ್ರಾಂಶ ಯೋಜನೆಯಡಿ ೨೩ ಗುಧ ಗರ್ಭದಾರಣೆ ಕಾರ್ಯಕರ್ತರಿಗೆ  ಟ್ಯಾಬ್ ವಿತರಿಸಿ ಮಾತನಾಡಿದರು.

ಕೊಚಿಮುಲ್ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಗುಧ ಗರ್ಭದಾರಣೆ ಮಾಹಿತಿ ಕೊರತೆ ಇತ್ತು ಆ ಕೊರತೆಯನ್ನು ಸರಿಪಡಿಸುವ ಉದ್ದೇಶದಿಂದ ರಾಜ್ಯದಲ್ಲಿಯೇ ಮೊದಲಭಾರಿಗೆ ತಳಿ ಸಂಮೃದ್ಧಿ ತಂತ್ರಾಂಶ ಯೋಜನೆಯಡಿ ಟ್ಯಾಬ್ ವಿತರಿಸಲಾಗುತ್ತಿದ್ದು, ಕಾರ್ಯಕರ್ತರು ಸಹಕಾರ ಸಂಘಗಳಿಗೆ ಭೇಟಿ ನೀಡಿ ಆಗಿಂದಗಾಲೆ ಗರ್ಭದಾರಣೆ ಪರೀಕ್ಷಿಸಿದ ನಂತರ ತಕ್ಷಣ ಮಾಹಿತಿ ಶೇಖರಣೆ ಮಾಡಿ ಮಾಹಿತಿ ಸಂಗ್ರಹಿಸಲು ಅನುಕೂಲಕರವಾಗಿದೆ ಎಂದರು .

ಈ ಸಂದರ್ಭದಲಿ ಕೊಚಿಮುಲ್ ಮಹಿಳಾ ನಿರ್ದೇಶಕಿ ಕಾಂತಮ್ಮ ಸೋಮಣ್ಣ, ಉಪ ವ್ಯವಸ್ಥಾಪಕ ಡಾ.ಚೇತನ್, ನಾರಾಯಣ ಸ್ವಾಮಿ,  ಇ.ಒ ಎನ್.ವೆಂಕಟೇಶ್ ಮುಖಂಡ ಅಂಜನಿ ಸೋಮಣ್ಣ ಸಿಬ್ಬಂದಿ ಮರಿಸ್ವಾಮಿ ಸೇರಿದಂತೆ ಕೊಚಿಮುಲ್ ಅಧಿಕಾರಿ ವರ್ಗ ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos