ಹೊಸ ವರ್ಷ: ಗುತ್ತಿಗೆದಾರರು ನಿಯಮಗಳನ್ನು ಗಾಳಿಗೆ ತೂರಿದ್ರಾ?

ಹೊಸ ವರ್ಷ: ಗುತ್ತಿಗೆದಾರರು ನಿಯಮಗಳನ್ನು ಗಾಳಿಗೆ ತೂರಿದ್ರಾ?

ಉಡುಪಿ: ಹೊಸ ವರ್ಷ ಆಚರಣೆಗಾಗಿ ಪ್ರವಾಸಿಗರ ದಂಡೆ ಬರುತ್ತದೆ. ಇದರಿಂದ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿದೆ. ಆದರೆ ಗುತ್ತಿಗೆದಾರರು ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಅಂತ ಆರೋಪ ಕೇಳಿ ಬರುತ್ತಿದೆ. ಸಮುದ್ರದಲ್ಲಿ ರಾತ್ರಿ ವೇಳೆ ಪ್ರವಾಸಿಗರ ಪ್ರಯಾಣ ನಿಯಮ ಗಾಳಿಗೆ ತೂರಿದ್ರ ಗುತ್ತಿಗೆದಾರರು. ಉಡುಪಿ ಪ್ರವಾಸೋದ್ಯಮದ  ಪ್ರಮುಖ ಜಿಲ್ಲೆಯಾಗಿದೆ. ಇಲ್ಲಿರುವ ದೈವದೇ ಗುಣಗಳು ಪ್ರವಾಸಿಗರ ಆಕರ್ಷಣೆ.

ಆದರೆ ಪ್ರಾಕೃತಿಕವಾಗಿರುವ ಬೀಚ್ ಮತ್ತು ದ್ವೀಪಗಳು ಮೋಜು-ಮಸ್ತಿಗೆ ಪ್ರವಾಸಿಗರನ್ನು ಸೆಳೆಯುತ್ತದೆ. ಮಲ್ಪೆ ಬೀಚ್, ಸೆಂಟ್ ಮೇರಿ ದ್ವೀಪಗಳು ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳು. ನಾಳಿನ ವರ್ಷಾಚರಣೆಗೆ ಸಕಲ ಸಿದ್ಧತೆ ನಡೆದಿದೆ. ಆದರೆ ಬೀಚ್ ಗುತ್ತಿಗೆ ಪಡೆದ ಗುತ್ತಿಗೆದಾರರು ನಿಯಮಗಳನ್ನು ಗಾಳಿಗೆ ತೂರಿದಾರೆ. ಇದಕ್ಕೆ ಸಾಕ್ಷಿ ಎಂಬಂತೆ ರಾತ್ರಿಯಲ್ಲಿ ಅಲ್ಪೆ ಬೀಚ್ಗೆ ಕರೆ ತಂದಿದ್ದಾರೆ. ನಿಯಮದಂತೆ ಸಂಜೆ 5:30ಕ್ಕೆ ಪ್ರವಾಸಿಗರ ಬೋಟ್ ಮಲ್ಪೆ ದಡದಲ್ಲಿರಬೇಕು ಆದರೆ ಸೂರ್ಯಸ್ತಮವಾದ ಬಳಿಕ ಪ್ರವಾಸಿಗರನ್ನು ಸಮುದ್ರಕ್ಕೆ ಕರೆದುಕೊಂಡು ಹೋಗಿರುವ ಉದ್ದೇಶವೇನು ಸ್ಥಳೀಯರ ಪ್ರಶ್ನೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos